ಏನೇನು ಬೇಕು?
ಅಕ್ಕಿ
ಮಸೂರ್ ದಾಲ್
ಈರುಳ್ಳಿ & ಟೊಮೆಟೊ:
ಹಸಿಮೆಣಸಿನಕಾಯಿ & ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಸಾಸಿವೆ, ಜೀರಿಗೆ, ಅರಿಶಿಣ, ಇಂಗು ಮತ್ತು ತುಪ್ಪ
ಉಪ್ಪು ಮತ್ತು ಕೊತ್ತಂಬರಿ ಸೊಪ್ಪು.
ಮಾಡೋದು ಹೇಗೆ ನೋಡಿ
ಮೊದಲು ಕುಕ್ಕರ್ನಲ್ಲಿ 1 ಚಮಚ ತುಪ್ಪ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಜೀರಿಗೆ, ಇಂಗು, ಹಸಿಮೆಣಸಿನಕಾಯಿ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಈರುಳ್ಳಿ ಮತ್ತು ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಬಾಡಿಸಿ. ಅದಕ್ಕೆ ಸ್ವಲ್ಪ ಅರಿಶಿಣ ಮತ್ತು ಉಪ್ಪು ಸೇರಿಸಿ. ಈಗ ತೊಳೆದು ಇಟ್ಟುಕೊಂಡ ಅಕ್ಕಿ ಮತ್ತು ಮಸೂರ್ ದಾಲ್ ಹಾಕಿ 1 ನಿಮಿಷ ಮಿಕ್ಸ್ ಮಾಡಿ. 1 ಕಪ್ ಅಕ್ಕಿ-ಬೇಳೆ ಮಿಶ್ರಣಕ್ಕೆ ಸುಮಾರು 3.5 ರಿಂದ 4 ಕಪ್ ನೀರು ಸೇರಿಸಿ. ಕುಕ್ಕರ್ ಮುಚ್ಚಳ ಮುಚ್ಚಿ 3 ರಿಂದ 4 ವಿಸಿಲ್ ಕೂಗಿಸಿ. ಕುಕ್ಕರ್ ತಣ್ಣಗಾದ ಮೇಲೆ ಮೇಲೆ ಸ್ವಲ್ಪ ತುಪ್ಪ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿದರೆ ಘಮಘಮಿಸುವ ಮಸೂರ್ ದಾಲ್ ಖಿಚಡಿ ಸಿದ್ಧ!
ಆರೋಗ್ಯಕ್ಕೆ ಸೂಪರ್ ಫುಡ್
ಮಸೂರ್ ಬೇಳೆಯಲ್ಲಿ ಪ್ರೊಟೀನ್, ನಾರಿನಂಶ, ಐರನ್ ಮತ್ತು ವಿಟಮಿನ್ಗಳು ಹೇರಳವಾಗಿವೆ.
ಇದು ಜೀರ್ಣಕ್ರಿಯೆಗೆ ಅತ್ಯುತ್ತಮವಾಗಿದ್ದು, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸೂಕ್ತ ಆಹಾರ.
ಜ್ವರ, ಸುಸ್ತು ಅಥವಾ ಜೀರ್ಣಾಂಗ ತೊಂದರೆ ಇದ್ದಾಗ ಈ ಖಿಚಡಿ ಸೇವನೆ ದೇಹಕ್ಕೆ ತಕ್ಷಣದ ಶಕ್ತಿ ನೀಡುತ್ತದೆ.
ಮಧುಮೇಹಿಗಳು ಮತ್ತು ರಕ್ತದೊತ್ತಡ ಇರುವವರು ಕೂಡ ಧೈರ್ಯವಾಗಿ ಇದನ್ನು ಸೇವಿಸಬಹುದು.



