ಸಾಬುದಾನ
ಬೇಯಿಸಿದ ಆಲೂಗಡ್ಡೆ
ಹುರಿದ ಕಡಲೆಕಾಯಿ
ಹಸಿಮೆಣಸಿನಕಾಯಿ
ಜೀರಿಗೆ
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಆಲೂಗಡ್ಡೆಯನ್ನು ಕುಕ್ಕರ್ಗೆ ಹಾಕಿ, ಜೊತೆಗೆ ಒಂದು ಲೋಟ ನೀರು ಹಾಕಿ ಮೂರು ವಿಶಲ್ ಕೂಗಿಸಿ
ಆನಂತರ ಬಟ್ಟಲಿಗೆ ನೆನೆಸಿದ ಸಾಬುದಾನ, ಬೇಯಿಸಿದ ಆಲೂಗಡ್ಡೆ ಹಾಕಿ
ಮೇಲೆ ಸಣ್ಣಗೆ ಹೆಚ್ಚಿದ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು, ಜೀರಿಗೆ ಹಾಕಿ
ಆನಂತರ ಪ್ಯಾನ್ ಬಿಸಿ ಇಟ್ಟು ಶೇಂಗಾ ಹುರಿದುಕೊಳ್ಳಿ. ಇದನ್ನು ಕೋರ್ಸ್ ಆಗಿ ಪುಡಿ ಮಾಡಿಕೊಂಡು ಸಾಬುದಾನ ಮಿಶ್ರಣಕ್ಕೆ ಹಾಕಿ
ಆನಂತರ ಎಲ್ಲವನ್ನೂ ಮಿಕ್ಸ್ ಮಾಡಿ ಟಿಕ್ಕಿಯ ರೀತಿ ಮಾಡಿಕೊಳ್ಳಿ
ನಂತರ ಕಾದ ಎಣ್ಣೆಗೆ ಹಾಕಿ ಕರಿದರೆ ಸಾಬುದಾನ ಟಿಕ್ಕಿ ರೆಡಿ



