October 23, 2026
Friday, October 23, 2026
spot_img

ದಳಪತಿ ವಿಜಯ್ ನನ್ನ ಲಕ್ಕಿ ಚಾರ್ಮ್: ‘ಮಾಸ್ಟರ್‌ಶೆಫ್’ ವೇದಿಕೆಯಲ್ಲಿ ಸಮಂತಾ ಗುಣಗಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸಮಂತಾ ರುತ್ ಪ್ರಭು ಅವರು ಪ್ರಸ್ತುತ ನಿರೂಪಣೆ ಮಾಡುತ್ತಿರುವ ಜನಪ್ರಿಯ ‘ಸೆಲೆಬ್ರಿಟಿ ಮಾಸ್ಟರ್‌ಶೆಫ್‌ ತಮಿಳ್’ ರಿಯಾಲಿಟಿ ಶೋ ನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಕುರಿತು ವಿಶೇಷವಾಗಿ ಮಾತನಾಡಿದ್ದಾರೆ. ಶೋನ ಸಂಚಿಕೆಯಲ್ಲಿ, ಆರ್.ಜೆ. ವಿಜಯ್ ಅವರ ಜೊತೆಗಿನ ಮಾತುಕತೆಯ ವೇಳೆ ಸಮಂತಾ ಅವರು ವಿಜಯ್ ಅವರನ್ನು ತಮ್ಮ ನೆಚ್ಚಿನ ನಟ ಹಾಗೂ ‘ಲಕ್ಕಿ ಚಾರ್ಮ್’ ಎಂದು ಬಣ್ಣಿಸಿದ್ದಾರೆ.

ತಮ್ಮ ಮತ್ತು ವಿಜಯ್ ಅವರ ಜೊತೆಗಿನ ನಟನೆಯ ದಿನಗಳನ್ನು ಮೆಲುಕು ಹಾಕಿರುವ ಸಮಂತಾ, ತಾವು ಒಟ್ಟಿಗೆ ನಟಿಸಿದ ಸಿನಿಮಾಗಳನ್ನು ನೆನಪಿಸಿಕೊಂಡಿದ್ದಾರೆ. ನಾವು ನಟ್ಟಿಸಿದ್ದ ಮೂರೂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡು ನೂರು ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದ್ದವು. ವಿಶೇಷವಾಗಿ ‘ಮೆರ್ಸಲ್’ ಸಿನಿಮಾ 250 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿತ್ತು ಎಂದು ತಿಳಿಸಿದ್ದಾರೆ.

ಸಿನಿಮಾ ರಂಗದ ಉತ್ತುಂಗದಲ್ಲಿದ್ದಾಗ ನಟನೆಯನ್ನು ಸಂಪೂರ್ಣವಾಗಿ ತೊರೆದು, ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾಜಕೀಯ ಹಾಗೂ ಜನ ಸೇವೆಯ ಹಾದಿಯನ್ನು ಆಯ್ಕೆ ಮಾಡಿಕೊಂಡಿರುವ ವಿಜಯ್ ಅವರ ದಿಟ್ಟ ನಿರ್ಧಾರವನ್ನು ಸಮಂತಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಪ್ರೀತಿ ಗಳಿಸಿರುವ ವಿಜಯ್, ತೆರೆಯ ಹಿಂದೆ ಅಪಾರ ಪರಿಶ್ರಮ ಪಟ್ಟು ಸರಿಯಾದ ಸಮಯಕ್ಕೆ ರಾಜಕೀಯ ಪ್ರವೇಶ ಮಾಡಿರುವುದು ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Must Read