October 25, 2026
Sunday, October 25, 2026
spot_img

FOOD | ಸೂಪರ್ ಟೇಸ್ಟಿ.. ಬಾಯಲ್ಲಿ ನೀರೂರಿಸುವ ‘ಮ್ಯಾಂಗೋ ಕ್ರೀಮ್ ಸ್ಯಾಂಡ್‌ವಿಚ್’ ಟ್ರೈ ಮಾಡಿ

ಬೇಕಾಗುವ ಸಾಮಗ್ರಿಗಳು:

ಮಾವಿನ ಹಣ್ಣು

ಬ್ರೆಡ್ ಸ್ಲೈಸ್‌ಗಳು

ವಿಪ್ಪಿಂಗ್ ಕ್ರೀಮ್

ಸಕ್ಕರೆ ಪುಡಿ

ವೆನಿಲಾ ಎಸೆನ್ಸ್

ಮಾಡುವ ವಿಧಾನ

ಮೊದಲಿಗೆ ಒಂದು ಬೌಲ್‌ನಲ್ಲಿ ವಿಪ್ಪಿಂಗ್ ಕ್ರೀಮ್, ಸಕ್ಕರೆ ಪುಡಿ ಮತ್ತು ವೆನಿಲಾ ಎಸೆನ್ಸ್ ಸೇರಿಸಿ. ಕ್ರೀಮ್ ಗಟ್ಟಿಯಾಗುವವರೆಗೆ ಚೆನ್ನಾಗಿ ಬ್ಲೆಂಡ್ ಮಾಡಿ. ಬ್ರೆಡ್ ಸ್ಲೈಸ್‌ಗಳ ನಾಲ್ಕೂ ಬದಿಯ ಕಂದು ಬಣ್ಣದ ಅಂಚುಗಳನ್ನು ಕತ್ತರಿಸಿ ತೆಗಿರಿ. ಒಂದು ಬ್ರೆಡ್ ಸ್ಲೈಸ್ ಮೇಲೆ ತಯಾರಿಸಿಟ್ಟುಕೊಂಡ ಕ್ರೀಮ್ ಅನ್ನು ದಪ್ಪವಾಗಿ ಹರಡಿ. ಕ್ರೀಮ್‌ ಮೇಲೆ ಕತ್ತರಿಸಿಟ್ಟುಕೊಂಡ ತಾಜಾ ಮಾವಿನ ಹಣ್ಣಿನ ತುಂಡುಗಳನ್ನು ಸಾಲಾಗಿ ಜೋಡಿಸಿ. ಅದರ ಮೇಲೆ ಮತ್ತಷ್ಟು ಕ್ರೀಮ್ ಹಾಕಿ. ಇನ್ನೊಂದು ಬ್ರೆಡ್ ಸ್ಲೈಸ್‌ನಿಂದ ಇದನ್ನು ಮುಚ್ಚಿ, ಹಗುರವಾಗಿ ಒತ್ತಿ. ಇದನ್ನು ಪ್ಲಾಸ್ಟಿಕ್ ರ‍್ಯಾಪ್‌ನಲ್ಲಿ ಸುತ್ತಿ ಕನಿಷ್ಠ 30 ನಿಮಿಷಗಳ ಕಾಲ ಫ್ರಿಡ್ಜ್‌ನಲ್ಲಿಡಿ. ನಂತರ ನಿಮಗೆ ಬೇಕಾದ ಶೇಪ್ ಗೆ ಕತ್ತರಿಸಿದರೆ ಮ್ಯಾಂಗೋ ಕ್ರೀಮ್ ಸ್ಯಾಂಡ್‌ವಿಚ್ ಸಿದ್ಧ!

Must Read