October 23, 2026
Friday, October 23, 2026
spot_img

ಶೀತ-ಕೆಮ್ಮಿಗೆ ಬೆಸ್ಟ್ ಮೆಡಿಸಿನ್.. ನಿಮಿಷಗಳಲ್ಲಿ ತಯಾರಿಸಿ ‘ಗೋಲ್ಡನ್ ಮಿಲ್ಕ್ ಟೀ’

ಬೇಕಾಗುವ ಸಾಮಗ್ರಿಗಳು:

ಹಾಲು

ನೀರು

ಅರಿಶಿಣ ಪುಡಿ

ಶುಂಠಿ

ಕಾಳುಮೆಣಸಿನ ಪುಡಿ

ಏಲಕ್ಕಿ ಪುಡಿ

ಜೇನುತುಪ್ಪ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ನೀರು, ಜಜ್ಜಿದ ಶುಂಠಿ ಮತ್ತು ಅರಿಶಿಣ ಹಾಕಿ ೨-೩ ನಿಮಿಷ ಚೆನ್ನಾಗಿ ಕುದಿಸಿ. ನಂತರ ಅದಕ್ಕೆ ಹಾಲು, ಕಾಳುಮೆಣಸಿನ ಪುಡಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಹಾಲಿನ ಸುವಾಸನೆ ಆವರಿಸಿದಾಗ ಉರಿಯನ್ನು ಆರಿಸಿ, ಚಹಾವನ್ನು ಲೋಟಕ್ಕೆ ಸೋಸಿಕೊಳ್ಳಿ. ಹಾಲು ಸ್ವಲ್ಪ ಉಗುರುಬೆಚ್ಚಗಾದಾಗ ರುಚಿಗೆ ತಕ್ಕಷ್ಟು ಜೇನುತುಪ್ಪ ಸೇರಿಸಿದರೆ ಬಿಸಿಬಿಸಿಯಾದ ಗೋಲ್ಡನ್ ಮಿಲ್ಕ್ ಟೀ ಸಿದ್ಧ!

Must Read