October 25, 2026
Sunday, October 25, 2026
spot_img

ವಾಯುಪಡೆಯ ಶೌರ್ಯಕ್ಕೆ ಸಾಕ್ಷಿಯಾಗಲಿದೆ ವಾರಾಣಸಿ: ಪ್ರಧಾನಿ ಮೋದಿಯನ್ನು ಸ್ವಾಗತಿಸಿ ರಾಜನಾಥ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ವಾಯುಪಡೆಯ (IAF) 94ನೇ ಸಂಸ್ಥಾಪನಾ ದಿನಾಚರಣೆಯ ಸಂಭ್ರಮದಲ್ಲಿರುವ ಸಾಂಸ್ಕೃತಿಕ ನಗರಿ ವಾರಾಣಸಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆಗಮಿಸಿದ್ದು, ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ವಾರಾಣಸಿಯ ನಮೋ ಘಾಟ್‌ನಲ್ಲಿ ನಡೆಯಲಿರುವ ವಾಯುಪಡೆಯ ಹೆಮ್ಮೆಯ ‘ವಿಂಗ್ಸ್ ಓವರ್ ಗಂಗಾಸ್’ ಬೃಹತ್ ವೈಮಾನಿಕ ಪ್ರದರ್ಶನದಲ್ಲಿ ಪ್ರಧಾನಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ವಾಯುಪಡೆಯ ಶಕ್ತಿ ಪ್ರದರ್ಶನ

ಈ ಐತಿಹಾಸಿಕ ಕಾರ್ಯಕ್ರಮದ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಭಾರತೀಯ ವಾಯುಪಡೆಯ 94 ಅದ್ಭುತ ವರ್ಷಗಳ ಸಾಧನೆಯ ಸಂಕೇತವಾಗಿರುವ ‘ವಿಂಗ್ಸ್ ಓವರ್ ಗಂಗಾಸ್’ ಪ್ರದರ್ಶನದಲ್ಲಿ ವಾಯುಪಡೆಯ ಶೌರ್ಯಕ್ಕೆ ಕಾಶಿ ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಆತ್ಮೀಯ ಸ್ವಾಗತ. ವಾರಾಣಸಿಯು ಬಲಿಷ್ಠ, ಸ್ವಾವಲಂಬಿ ಮತ್ತು ಉದಯೋನ್ಮುಖ ನವ ಭಾರತವನ್ನು ಜಗತ್ತಿಗೆ ಬಿಂಬಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ರಂಗೇರಿದ ಕಾಶಿಯ ಆಕಾಶ

ವೈಮಾನಿಕ ಪ್ರದರ್ಶನಕ್ಕೂ ಮುನ್ನವೇ ವಾರಾಣಸಿಯ ಆಕಾಶದಲ್ಲಿ ವಾಯುಪಡೆಯ ಪ್ರಮುಖ ಪ್ರದರ್ಶನ ತಂಡಗಳಾದ ‘ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ’ (SKAT) ಮತ್ತು ‘ಸಾರಂಗ್ ಹೆಲಿಕಾಪ್ಟರ್ ತಂಡಗಳು’ ಭರ್ಜರಿ ತಾಲೀಮು ನಡೆಸಿ ರಂಗು ಮೂಡಿಸಿವೆ. ಈ ಪ್ರದರ್ಶನದಲ್ಲಿ ದೇಶೀಯ ತಂತ್ರಜ್ಞಾನದ ತೇಜಸ್ ಯುದ್ಧ ವಿಮಾನ, ಪ್ರಚಂಡ ಲಘು ಯುದ್ಧ ಹೆಲಿಕಾಪ್ಟರ್ (LCH), ಐಎಲ್-76, ಐಎಲ್-78, ಸಿ-295 ಮತ್ತು ಎಎನ್-32 ಸಾರಿಗೆ ವಿಮಾನಗಳೊಂದಿಗೆ, ಮುಂಚೂಣಿ ಯುದ್ಧ ವಿಮಾನಗಳಾದ ರಫೇಲ್ ಮತ್ತು ಸುಖೋಯ್-30 MKI ಆಕಾಶದಲ್ಲಿ ಸಾಹಸ ಪ್ರದರ್ಶಿಸಲಿವೆ. ಇದೇ ಮೊದಲ ಬಾರಿಗೆ ಭಾರತೀಯ ಭೂಸೇನೆ ಹಾಗೂ ನೌಕಾಸೇನೆಯ ವಿಮಾನಗಳೂ ಜಂಟಿಯಾಗಿ ಈ ಶಕ್ತಿ ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ.

ಇದನ್ನೂ ಓದಿ:

ಪ್ರಧಾನಿ ರೋಡ್ ಶೋ ಮತ್ತು ಉದ್ಘಾಟನೆ

ತಮ್ಮದೇ ಸಂಸದೀಯ ಕ್ಷೇತ್ರಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಅವರು ಪೊಲೀಸ್ ಲೈನ್ಸ್‌ನಿಂದ ಆರಂಭಿಸಿ ಸಾಂಸ್ಕೃತಿಕ ಸಂಕೀರ್ಣ ಮತ್ತು ಚೌಕಾಗಾಟ್ ಮೂಲಕ ನಮೋ ಘಾಟ್‌ವರೆಗೆ ಅದ್ಧೂರಿ ರೋಡ್ ಶೋ ನಡೆಸಲಿದ್ದಾರೆ. ಕಾಶಿಯ ಯುವ ಪೀಳಿಗೆಯು ಹೂವಿನ ಮಳೆಯೊಂದಿಗೆ ಪ್ರಧಾನಿಯನ್ನು ಸ್ವಾಗತಿಸಲು ಸಜ್ಜಾಗಿದೆ. ಈ ಭೇಟಿಯ ಅವಧಿಯಲ್ಲಿ ಪ್ರಧಾನಿಯವರು ಅರವಿಂದ್ ಮಿಲ್ಸ್‌ನ ನೂತನ ಸಿದ್ಧ ಉಡುಪು ತಯಾರಿಕಾ ಘಟಕವನ್ನು ಉದ್ಘಾಟಿಸಲಿದ್ದಾರೆ.

Must Read