October 25, 2026
Sunday, October 25, 2026
spot_img

ಸಾಧ್ಯವಿಲ್ಲದ್ದನ್ನು ಸಾಧಿಸಿ ತೋರಿಸಿದ ಭಾರತ: ಟಿ20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆಯ ಹೆಜ್ಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ನಿರ್ಮಿಸಿದೆ. ಯಾವುದೇ ತಂಡಕ್ಕೆ ಇದುವರೆಗೆ ಸಾಧ್ಯವಾಗದ ಈ ಐತಿಹಾಸಿಕ ವರ್ಲ್ಡ್ ರೆಕಾರ್ಡ್ ಅನ್ನು ಭಾರತೀಯ ಕ್ರಿಕೆಟ್ ತಂಡ ತನ್ನದಾಗಿಸಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಹಾಗೂ ರೋಚಕ ಗೆಲುವು ಸಾಧಿಸುವ ಮೂಲಕ ಟೀಮ್ ಇಂಡಿಯಾ ಈ ಕೀರ್ತಿಗೆ ಭಾಜನವಾಗಿದೆ.

ಈ ವಿಶೇಷ ಗೆಲುವಿನ ಮುಖಾಂತರ ಟಿ20 ಕ್ರಿಕೆಟ್ ಇತಿಹಾಸದಲ್ಲಿ 200 ಗೆಲುವುಗಳನ್ನು ದಾಖಲಿಸಿದ ವಿಶ್ವದ ಮೊದಲ ಹಾಗೂ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇದರ ಮತ್ತೊಂದು ವಿಶೇಷವೆಂದರೆ, ಭಾರತ ತಂಡವು ತನ್ನ 300ನೇ ಟಿ20 ಪಂದ್ಯದಲ್ಲೇ ಈ 200ನೇ ಗೆಲುವಿನ ಮೈಲಿಗಲ್ಲನ್ನು ತಲುಪುವ ಮೂಲಕ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಕ್ರಿಕೆಟ್ ಅಂಕಿ-ಅಂಶಗಳ ಪ್ರಕಾರ, ಟೀಮ್ ಇಂಡಿಯಾ ಈವರೆಗೆ ಆಡಿರುವ ಒಟ್ಟು 300 ಪಂದ್ಯಗಳಲ್ಲಿ 206 ಗೆಲುವುಗಳನ್ನು ತನ್ನ ಖಾತೆಗೆ ಹಾಕಿಕೊಂಡಿದೆ.

ಇದರಲ್ಲಿ ಸೂಪರ್ ಓವರ್ ಅಥವಾ ಬೌಲ್-ಔಟ್ ಮೂಲಕ ಸಿಕ್ಕ 6 ಗೆಲುವುಗಳು ಸೇರಿವೆ. ನಿಯಮಗಳ ಪ್ರಕಾರ ಸೂಪರ್ ಓವರ್‌ಗಳಲ್ಲಿ ಸಿಕ್ಕ ಜಯವನ್ನು ‘ನೇರ ಗೆಲುವು’ ಎಂದು ಪರಿಗಣಿಸುವುದಿಲ್ಲವಾದ್ದರಿಂದ, ಸಂಪೂರ್ಣವಾಗಿ ಪಂದ್ಯದ ಅವಧಿಯಲ್ಲಿ ಗೆದ್ದ 200 ನೇರ ಗೆಲುವುಗಳ ವಿಶ್ವ ದಾಖಲೆಯನ್ನು ಭಾರತ ಅಧಿಕೃತವಾಗಿ ತನ್ನದಾಗಿಸಿಕೊಂಡು ಇತಿಹಾಸದಪುಟಗಳಲ್ಲಿ ಹೊಸ ಅಧ್ಯಾಯ ಬರೆದಿದೆ.

Must Read