ಬೇಕಾಗುವ ಸಾಮಗ್ರಿಗಳು
ಮೊಟ್ಟೆ
ಹಾಲು
ಹೆಚ್ಚಿದ ಈರುಳ್ಳಿ, ಟೊಮೆಟೊ, ಕ್ಯಾಪ್ಸಿಕಂ, ಹಸಿಮೆಣಸು
ಚೀಸ್
ಉಪ್ಪು, ಕಾಳುಮೆಣಸಿನ ಪುಡಿ
ಎಣ್ಣೆ
ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಮೊಟ್ಟೆಗಳನ್ನು ಒಡೆದುಹಾಕಿ. ಅದಕ್ಕೆ ಹಾಲು, ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಬೀಟ್ ಮಾಡಿ. ಈಗ ಕತ್ತರಿಸಿಟ್ಟುಕೊಂಡ ಈರುಳ್ಳಿ, ಟೊಮೆಟೊ, ಕ್ಯಾಪ್ಸಿಕಂ ಹಾಗೂ ತುರಿದ ಚೀಸ್ ಅನ್ನು ಈ ಮೊಟ್ಟೆಯ ಮಿಶ್ರಣಕ್ಕೆ ಸೇರಿಸಿ ಒಮ್ಮೆ ಚೆನ್ನಾಗಿ ಕೈಯಾಡಿಸಿ. ಮಫಿನ್ ಟ್ರೇ ಅಥವಾ ಸಣ್ಣ ಸಿಲಿಕಾನ್ ಮೋಲ್ಡ್ಗಳಿಗೆ ಸ್ವಲ್ಪ ಎಣ್ಣೆ ಸವರಿ, ಈ ಮಿಶ್ರಣವನ್ನು ಅದಕ್ಕೆ ಸುರಿಯಿರಿ. ಮೈಕ್ರೋವೆನ್ ಇದ್ದರೆ 180 ಡಿಗ್ರಿಯಲ್ಲಿ 12-15 ನಿಮಿಷಗಳ ಕಾಲ ಬೇಕ್ ಮಾಡಿ. ಓವನ್ ಇಲ್ಲದಿದ್ದರೆ, ಇಡ್ಲಿ ಪಾತ್ರೆಯಲ್ಲೇ ಸಣ್ಣ ಬೌಲ್ಗಳಲ್ಲಿ ಹಾಕಿ 10-12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ ತೆಗೆಯಿರಿ. ಈಗ ರುಚಿಯಾದ ಚೀಸಿ ಎಗ್ ಬೈಟ್ಸ್ ಸವಿಯಲು ಸಿದ್ದ.



