ಬೇಕಾಗುವ ಪದಾರ್ಥಗಳು:
ಹಣ್ಣಾದ ಆವಕಾಡೊ
ಹಾಲು
ಸಕ್ಕರೆ
ಏಲಕ್ಕಿ ಪುಡಿ
ಗೋಡಂಬಿ, ಬಾದಾಮಿ ಮತ್ತು ಪಿಸ್ತಾ
ಮಾಡುವ ವಿಧಾನ
ಮೊದಲು ಆವಕಾಡೊ ಹಣ್ಣಿನ ಸಿಪ್ಪೆ ಮತ್ತು ಬೀಜ ತೆಗೆದು, ತಿರುಳನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಅದೇ ಜಾರಿಗೆ ಕಾಯಿಸಿ ಆರಿಸಿದ ಹಾಲು ಮತ್ತು ಸಕ್ಕರೆ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಬ್ಲೆಂಡ್ ಮಾಡಿ. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಮೇಲಿಂದ ಏಲಕ್ಕಿ ಪುಡಿ ಹಾಗೂ ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ ತುಂಡುಗಳನ್ನು ಸೇರಿಸಿ ಮಿಕ್ಸ್ ಮಾಡಿ. ಇದನ್ನು ಸ್ವಲ್ಪ ಸಮಯ ಫ್ರಿಡ್ಜ್ನಲ್ಲಿಟ್ಟು ತಣ್ಣಗಾದ ಮೇಲೆ ಸವಿದರೆ ಇದರ ರುಚಿ ಅದ್ಭುತವಾಗಿರುತ್ತೆ!



