October 26, 2026
Monday, October 26, 2026
spot_img

17 ಮಹಡಿಯಿಂದ ಕೆಳಗೆ ಬಿದ್ದ ಮೂರು ವರ್ಷದ ಕಂದಮ್ಮ: ಈ ಒಂದು ತಪ್ಪಿನಿಂದ ಹೋಯ್ತು ಪ್ರಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಆದಿತ್ಯ ವರ್ಲ್ಡ್‌ ಸಿಟಿಯಲ್ಲಿರುವ ಅಪಾರ್ಟ್‌ಮೆಂಟ್‌ ಒಂದರಲ್ಲಿ ಭೀಕರ ಅವಘಡ ಸಂಭವಿಸಿದೆ. ಮೂರು ವರ್ಷದ ಮಗುವೊಂದು 17 ನೇ ಮಹಡಿಯಿಂದ ಕೆಳಕ್ಕೆ ಬಿದ್ದು ಮರಣ ಹೊಂದಿದೆ.

17 ನೇ ಮಹಡಿಯಲ್ಲಿದ್ದ ತೆರೆದ ಕಿಟಕಿ ಎಸಿ ಘಟಕದಿಂದ ಜಾರಿ ಕೆಳಕ್ಕೆ ಬಿದ್ದಿದ್ದು, ಮಗು ತೀರ್ಥ್‌ ಗೋಯಲ್‌ ಕೊನೆಯುಸಿರೆಳೆದಿದೆ. ಅನ್ಶುಲ್‌ ಗೋಯಲ್‌ ಅವರ ಮಗು ತೀರ್ಥ್‌ ಎಂದಿನಂತೆ ಆಟದಲ್ಲಿ ನಿರತನಾಗಿದ್ದ. ದುರಸ್ತಿಗಾಗಿ ಕಿಟಕಿಯ ಎಸೆಯನ್ನು ತೆಗೆದು ಇಡಲಾಗಿತ್ತು. ಈ ವೇಳೆ ಆಟವಾಡುತ್ತಾ ಎಸಿ ವೆಂಟ್‌ ಮೂಲಕ ಕೆಳಗೆ ಬಿದ್ದಿದ್ದಾನೆ.

ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗು ಆಸ್ಪತ್ರೆಗೆ ಬರುವ ಮುನ್ನವೇ ಕೊನೆಯುಸಿರೆಳೆದಿದೆ ಎಂದು ವೈದ್ಯರು ಹೇಳಿದ್ದಾರೆ. ಮಕ್ಕಳು ಆಟ ಆಡುತ್ತಿದ್ದರೂ ಯಾರಾದರೂ ಅವರನ್ನು ನೋಡುತ್ತಲೇ ಇರುವುದು ಉತ್ತಮವಾಗಿದೆ. ಅವಘಡಗಳು ನಡೆಯಲು ಒಂದು ಕ್ಷಣವಷ್ಟೇ ಸಾಕು!

Must Read