ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ನಡೆದ ದಸರಾ ಆಯೋಜನೆಯಲ್ಲಿ ನಡೆದ ಕೆಲ ಘಟನೆಗಳ ಬಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಉತ್ತರದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಅರಮನೆ, ಪ್ಯಾಲೇಸ್ ಬೋರ್ಡ್ ಸರ್ಕಾರದ್ದು ಎಂದು ಹೇಳಿದ್ದಾರೆ.
ರಾಜಮನೆತನ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಅಗತ್ಯವಿದೆ. ಅಂಬಾರಿ ವಿಚಾರದಲ್ಲಿ ಅವರು ಕೋರ್ಟ್ಗೆ ಹೋಗುತ್ತಾರೆ ಎಂದರೆ ಹೋಗಲಿ. ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ ಎಂದಿದ್ದಾರೆ. ಅವರು ಹೇಳಿದ್ದು ಎಲ್ಲವನ್ನೂ ಕೇಳಲು ಆಗುವುದಿಲ್ಲ. ಅರಮನೆ, ಪ್ಯಾಲೇಸ್ ಬೋರ್ಡ್ ಸರ್ಕಾರದ್ದು ಎಂದು ಗರಂ ಆಗಿದ್ದಾರೆ.
1971ರಿಂದ ಸರ್ಕಾರ ಅಧಿಕೃತವಾಗಿ ದಸರಾ ಆಚರಣೆ ಮಾಡುತ್ತಿದೆ. ಸ್ವಾತಂತ್ರ್ಯ ಬಂದಮೇಲೆಯೇ ನಾಡಹಬ್ಬ ಎಂದಾಗಿದೆ. ನಾವು ಪ್ರಜಾಪ್ರಭುತ್ಬದಲ್ಲಿ ಸರ್ಕಾರ ದಸರಾ ನಡೆಸುತ್ತಿದೆ. ನಾವು ಮುಂದುವರಿಸುತ್ತಿದ್ದೇವೆ. ಏನೇ ಸಮಸ್ಯೆ ಇದ್ದರೂ ಸರಿಪಡಿಸೋಣ ಎಂದಿದ್ದಾರೆ. ಸರ್ಕಾರ ನಡೆಸುವ ದಸರಾ ನಡೆಸಲು ಅವಕಾಶ ಮಾಡಿಕೊಡಬೇಕು, ಅದೇ ರೀತಿ ರಾಜಮನೆತನ ದಸರಾ ನಡೆಸಲು ನಾವು ಅವಕಾಶ ಮಾಡಿಕೊಡಬೇಕು. ಅವರು ಧಾರ್ಮಿಕ ಕಾರ್ಯ ನಡೆಸಲು ಸ್ವತಂತ್ರರು. ಅವರಿಗೆ ಖಾಸಗಿ ದಸರಾ ನಡೆಸಲು ಅವಕಾಶವಿದೆ. ಹೀಗಾಗಿ ಸಮನ್ವಯತೆ ಎಂಬುದು ಮುಖ್ಯವಾಗಿದೆ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಸಮಸ್ಯೆ ಬಗೆಹರಿಸಲು ಸರ್ಕಾರ ಸಿದ್ಧ ಎಂದು ಹೇಳಿದ್ದಾರೆ.



