ಸಾಮಗ್ರಿಗಳು:
ತೊಗರಿಬೇಳೆ
ಟೊಮೆಟೊ
ಹುಣಸೆಹಣ್ಣು
ಸಾಂಬಾರ್ ಪುಡಿ
ಸಾಸಿವೆ
ಕರಿಬೇವು
ಮಾಡುವ ವಿಧಾನ:
ತೊಗರಿಬೇಳೆಯನ್ನು ಎರಡು ಬಾರಿ ತೊಳೆದು ಕುಕ್ಕರ್‌ಗೆ ಹಾಕಿ. ಜೊತೆಗೆ ನೀರು, ಅರಿಶಿಣ ಹಾಗೂ ಉಪ್ಪು ಹಾಕಿ ಬೇಯಿಸಿ
ನಂತರ ಇದಕ್ಕೆ ಹುಣಸೆಹಣ್ಣಿನ ರಸ, ಟೊಮೆಟೊ ಮತ್ತು ಸಾಂಬಾರ್ ಪುಡಿ ಸೇರಿಸಿ ಕುದಿಸಿ.
ಆನಂತರ ಪಾತ್ರೆಗೆ ಎಣ್ಣೆ ಸಾಸಿವೆ ಕರಿಬೇವು ಹಾಗೂ ಒಣಮೆಣಸಿನಕಾಯಿ ಹಾಕಿ ಒಗರಣೆ ಮಾಡಿ
ಒಗರಣೆಯನ್ನು ಬೇಳೆಯ ಜೊತೆ ಸೇರಿಸಿ ಮಿಕ್ಸ್ ಮಾಡಿದ್ರೆ ಸಾಂಬಾರ್ ರೆಡಿ
ಬಿಸಿ ಅನ್ನಕ್ಕೆ ತುಪ್ಪ ಹಾಕಿ, ಸಾರು ಹಾಕಿ ತಿಂದರೆ ರುಚಿಯಾಗಿರುತ್ತದೆ. ಜೊತೆಗೆ ಬೋಂಡ, ಹಪ್ಪಳ ಇದ್ದರೆ ಇನ್ನೂ ಅದ್ಭುತ ರುಚಿ ಸಿಗುತ್ತದೆ



