October 27, 2026
Tuesday, October 27, 2026
spot_img

ಗೋಧಿ ಜೊತೆಗೆ ಈ ಬೇಳೆಕಾಳುಗಳನ್ನು ಹಾಕಿದ್ರೆ ಪ್ರೋಟೀನ್‌ ಚಪಾತಿ ತಿನ್ನಬಹುದು, ಇಲ್ಲಿದೆ ರೆಸಿಪಿ

ಸಾಮಾಗ್ರಿಗಳು

ಗೋಧಿ : ಐದು ಕೆಜಿ
ಜೋಳ : ಎರಡು ಕೆಜಿ
ಕಡ್ಲೆಕಾಳು : ಅರ್ಧ ಕೆಜಿ
ಹೆಸರುಕಾಳು: ಒಂದು ಕೆಜಿ
ಮೆಂತ್ಯೆ : ಕಾಲು ಕೆಜಿ
ಕಿನೋವಾ : ಅರ್ಧ ಕೆಜಿ
ಸಜ್ಜೆ : ಅರ್ಧ ಕೆಜಿ
ನವಣೆ : ಅರ್ಧ ಕೆಜಿ
ಸೋಯಾ : ಅರ್ಧ ಕೆಜಿ

ಮಾಡುವ ವಿಧಾನ

ಗೋಧಿಗೆ ಈ ಎಲ್ಲ ಪದಾರ್ಥಗಳನ್ನು ಹಾಕಿ ಮಿಲ್‌ ಮಾಡಿಸಿ. ತದನಂತರ ಒಂದು ಬಾರಿ ಜರಡಿ ಮಾಡಿ ಕವರ್‌ನಲ್ಲಿ ಹಾಕಿ. ಏರ್‌ಟೈಟ್‌ ಬಾಕ್ಸ್‌ನಲ್ಲಿ ಸ್ಟೋರ್‌ ಮಾಡಿ
ಇನ್ನೊಂದು ಬಾಕ್ಸ್‌ನಲ್ಲಿ ಒಂದು ಕೆಜಿಯಷ್ಟು ಹಿಟ್ಟನ್ನು ಹಾಕಿಕೊಂಡು ಬಳಸಿ.
ಹಿಟ್ಟಿಗೆ ಬೆಚ್ಚಗಿನ ನೀರು ಹಾಕಿ, ಉಪ್ಪು ಹಾಕಿ ಕಲಸಿದ್ರೆ ಚಪಾತಿ ಹಿಟ್ಟು ತಯಾರಾಗುತ್ತದೆ. ಇದು ರೆಗ್ಯುಲರ್‌ ಚಪಾತಿಯ ರುಚಿ ನೀಡೋದಿಲ್ಲ. ಆದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕಾಳುಗಳಿರುವ ಕಾರಣ ಪ್ರೋಟೀನ್‌ ಹಾಗೂ ಮಿನರಲ್ಸ್‌ ಹೇರಳವಾಗಿದೆ.

Must Read