October 27, 2026
Tuesday, October 27, 2026
spot_img

ಫಿಟ್ & ಫುಡ್ 27 | ಬೆಳಗ್ಗಿನ ತಿಂಡಿಗೆ ಹೆಲ್ದೀ ಚಾಯ್ಸ್‌: ಒಮ್ಮೆ ಟ್ರೈ ಮಾಡಿ ಈ ಬಿಸಿ ಬಿಸಿ ರಾಗಿ ಪೂರಿ

ಯಾವಾಗಲೂ ಅದೇ ಚಪಾತಿ, ಅದೇ ಇಡ್ಲಿ-ದೋಸೆ ತಿಂದು ಬೇಜಾರಾಗಿದೆಯೇ? ಹಾಗಾದ್ರೆ ಈ ಸಲ ಬೆಳಗ್ಗಿನ ತಿಂಡಿಗೆ ಏನಾದ್ರೂ ಡಿಫರೆಂಟ್ ಹಾಗೂ ಹೆಲ್ದೀ ಆಗಿ ಟ್ರೈ ಮಾಡಬೇಕು ಅಂದುಕೊಂಡ್ರೆ ‘ರಾಗಿ ಪೂರಿ’ ಬೆಸ್ಟ್ ಆಪ್ಷನ್. ಈ ಸಾಫ್ಟ್ ರಾಗಿ ಪೂರಿ ಹೇಗೆ ಮಾಡೋದು ಅಂತ ನೋಡೋಣ.

ಬೇಕಾಗುವ ಸಾಮಗ್ರಿಗಳು

ರಾಗಿ ಹಿಟ್ಟು

ಗೋಧಿ ಹಿಟ್ಟು

ಚಿರೋಟಿ ರವೆ

ಎಣ್ಣೆ

ಉಪ್ಪು

ನೀರು

ಮಾಡುವ ವಿಧಾನ

ಮೊದಲುಒಂದು ಅಗಲವಾದ ಪಾತ್ರೆಯಲ್ಲಿ ರಾಗಿ ಹಿಟ್ಟು, ಗೋಧಿ ಹಿಟ್ಟು, ರವೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದಕ್ಕೆ 1 ಚಮಚ ಎಣ್ಣೆ ಹಾಕಿ ಮತ್ತೊಮ್ಮೆ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಸ್ವಲ್ಪ ಸ್ವಲ್ಪವೇ ಉಗುರುಬೆಚ್ಚಗಿನ ನೀರನ್ನು ಹಾಕುತ್ತಾ, ಚಪಾತಿ ಹಿಟ್ಟಿಗಿಂತ ಕೊಂಚ ಗಟ್ಟಿಯಾಗಿ ಹಿಟ್ಟನ್ನು ಕಲಸಿಕೊಳ್ಳಿಬೇಕು. ಬಳಿಕ ಈ ಹಿಟ್ಟಿನ ಮೇಲೆ ಒದ್ದೆ ಬಟ್ಟೆ ಅಥವಾ ತಟ್ಟೆ ಮುಚ್ಚಿ 10 ರಿಂದ 15 ನಿಮಿಷ ನೆನೆಯಲು ಬಿಡಬೇಕು.

ನಂತರನೆನೆದ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ನಾದಿಕೊಂಡು, ಸಣ್ಣ ಸಣ್ಣ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿ ಪೂರಿನ್ನು ಲಟ್ಟಿಸಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿ. ಲಟ್ಟಿಸಿದ ಪೂರಿಯನ್ನು ಹಾಕಿ ಎರಡೂ ಕಡೆ ಕಂದು ಬಣ್ಣ ಬರುವವರೆಗೆ ಬೇಯಿಸಿ ತೆಗೆದರೆ ಬಿಸಿ ಬಿಸಿ ರಾಗಿ ಪೂರಿ ಸಿದ್ಧ.

Must Read