ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯನ್ನು ಇಂದು ಅಧಿಕೃತವಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಈ ಮಹತ್ವದ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಬರೋಬ್ಬರಿ 99 ಲಕ್ಷ ಮತದಾರರ ಡಿಲೀಟ್
ಈ ಬಾರಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಟ್ವಿಸ್ಟ್ ಸಿಕ್ಕಿದ್ದು, ರಾಜ್ಯದಲ್ಲಿ ಬರೋಬ್ಬರಿ 99.32 ಲಕ್ಷ ಮತಗಳು ಡಿಲೀಟ್ ಆಗಿವೆ. ಪರಿಷ್ಕರಣೆಗೆ ಮುನ್ನ ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರಿದ್ದರು. ಆದರೆ, ನಕಲಿ, ಮೃತಪಟ್ಟ ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ತೆಗೆದುಹಾಕಿದ ನಂತರ ಅಂತಿಮ ಪಟ್ಟಿಯಲ್ಲಿ ಮತದಾರರ ಸಂಖ್ಯೆ 4.55 ಕೋಟಿಗೆ ಇಳಿಕೆಯಾಗಿದೆ. ಅಂದರೆ ಒಟ್ಟು 99,32,303 ಮತಗಳು ಪಟ್ಟಿಯಿಂದ ನಾಪತ್ತೆಯಾಗಿವೆ.
ಅಂತಿಮ ಮತದಾರರ ಪಟ್ಟಿಯ ಅಂಕಿ-ಅಂಶಗಳು
ಇಂದು ಪ್ರಕಟಗೊಂಡ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯ ಲಿಂಗ ಆಧಾರಿತ ಹಾಗೂ ವಯೋಮಾನದ ಅಂಕಿ-ಅಂಶಗಳ ವಿವರ ಹೀಗಿದೆ. ರಾಜ್ಯದ ಒಟ್ಟು ಮತದಾರರಲ್ಲಿ 2,25,50,493 ಪುರುಷ ಮತದಾರರು ಹಾಗೂ 2,29,12,355 ಮಹಿಳಾ ಮತದಾರರು ಇದ್ದಾರೆ. ಇದರೊಂದಿಗೆ 18 ರಿಂದ 19 ವರ್ಷದೊಳಗಿನ ಒಟ್ಟು 6,83,364 ಯುವ ಮತದಾರರು ಲಿಸ್ಟ್ನಲ್ಲಿದ್ದು, ತೃತೀಯ ಲಿಂಗಿ ಸಮುದಾಯದ 2,841 ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ.
ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಚೆಕ್ ಮಾಡುವುದು ಹೇಗೆ?
ಲಕ್ಷಾಂತರ ಮತಗಳು ಡಿಲೀಟ್ ಆಗಿರುವುದರಿಂದ ಸಾರ್ವಜನಿಕರು ತಮ್ಮ ಹೆಸರನ್ನು ಇಂದೇ ಪರಿಶೀಲಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.
ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ voters.eci.gov.in ಗೆ ಭೇಟಿ ನೀಡಿ ಚೆಕ್ ಮಾಡಬಹುದು.
ನಿಮ್ಮ ಮೊಬೈಲ್ನಲ್ಲಿ Voter Helpline ಆ್ಯಪ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ವೋಟರ್ ಐಡಿ ಸಂಖ್ಯೆ ಹಾಕಿ ಪರಿಶೀಲಿಸಬಹುದು.
ಇದನ್ನೂ ಓದಿ:
ಹೆಸರು ಡಿಲೀಟ್ ಆಗಿದ್ದರೆ ಆತಂಕ ಬೇಡ
ಒಂದು ವೇಳೆ ಈ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಗಾಬರಿಪಡಬೇಕಾಗಿಲ್ಲ. ಆಯೋಗವು ‘ನಿರಂತರ ನವೀಕರಣ ವ್ಯವಸ್ಥೆ’ಯನ್ನು ಜಾರಿಯಲ್ಲಿಟ್ಟಿದ್ದು, ಅರ್ಹ ಮತದಾರರು ಆನ್ಲೈನ್ನಲ್ಲಿ ಫಾರ್ಮ್ 6ಭರ್ತಿ ಮಾಡುವ ಮೂಲಕ ಅಥವಾ ನಿಮ್ಮ ಭಾಗದ ಬೂತ್ ಮಟ್ಟದ ಅಧಿಕಾರಿ (BLO) / ತಾಲೂಕು ಕಚೇರಿಗೆ ಭೇಟಿ ನೀಡಿ ಹೊಸದಾಗಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದು.



