ಹೊಸದಿಗಂತ ವರದಿ ಮಂಗಳೂರು:
ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಇನ್ಮುಂದೆ ಸಾರ್ವಜನಿಕರು ದೂರುಗಳು ಹಾಗೂ ಇತರ ಪೊಲೀಸ್ ಸೇವೆಗಳಿಗಾಗಿ ನೂತನ ವಿಳಾಸವನ್ನು ಸಂಪರ್ಕಿಸುವಂತೆ ಮಂಗಳೂರು ನಗರ ಪೊಲೀಸ್ ಇಲಾಖೆ ತಿಳಿಸಿದೆ.
ಈ ಹಿಂದೆ ಜಪ್ಪಿನಮೊಗೆರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ-66ರ ಸಮೀಪ, ವಾಹನ ಗ್ಯಾರೇಜ್ ಮಾಲಕರ ಸಂಘದ ಬಳಿಯ ಖಾಸಗಿ ಕಟ್ಟಡದಲ್ಲಿ ಸಂಚಾರ ದಕ್ಷಿಣ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಠಾಣೆಯ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಉಳ್ಳಾಲ ತಾಲೂಕಿನ ಕೋಟೆಕಾರ್ ಗ್ರಾಮದ ಸಂಕೋಳಿಗೆಯಲ್ಲಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಹೊಸ ಠಾಣೆಯ ವಿಳಾಸ ಹೀಗಿದೆ
ಡೋರ್ ನಂ. 5-78, ಪುಷ್ಪ ನಿವಾಸ, ಶ್ರೀ ಕೃಷ್ಣ ಕಲ್ಯಾಣ ಮಂಟಪದ ಎದುರುಗಡೆ, ಸಂಕೋಳಿಗೆ, ಕೋಟೆಕಾರ್ ಗ್ರಾಮ, ಉಳ್ಳಾಲ ತಾಲೂಕು – 575023.
ಸಂಪರ್ಕ ವಿವರಗಳು: ದೂರವಾಣಿ ಸಂಖ್ಯೆ: 0824-2220850, ಮೊಬೈಲ್ ಸಂಖ್ಯೆ: 9480805371.
ಗೂಗಲ್ ಮ್ಯಾಪ್ ಸ್ಥಳ: https://maps.app.goo.gl/38Mscz54ZL6AHXfJ9
ಸಂಚಾರ ದಕ್ಷಿಣ ಪೊಲೀಸ್ ಠಾಣೆಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು, ಸಂಚಾರ ಸಮಸ್ಯೆಗಳ ಕುರಿತು ಮಾಹಿತಿ ನೀಡಲು ಹಾಗೂ ಇತರ ಪೊಲೀಸ್ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಇನ್ನು ಮುಂದೆ ಹೊಸ ವಿಳಾಸಕ್ಕೆ ಭೇಟಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.



