ಹೊಸದಿಗಂತ ವರದಿ ಕಲಬುರಗಿ:
ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಗೆಲುವಿನತ್ತ ಮುನ್ನಡೆದಿದ್ದು, ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲೇ ಭರ್ಜರಿ ಮುನ್ನಡೆ ಸಾಧಿಸಿ ಗೆಲುವು ಪಡೆದುಕೊಂಡಿದ್ದಾರೆ.
ಶಶೀಲ್ ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ವಿರುದ್ಧ 3,450 ಮತಗಳ ಮುನ್ನಡೆ ಹೊಂದಿದ್ದು, ಅವರ ಬೆಂಬಲಿಗರಲ್ಲಿ ಸಂಭ್ರಮ ಮನೆಮಾಡಿದೆ.
ಮತ ಎಣಿಕೆಯ ಮೊದಲ ಸುತ್ತಿನಲ್ಲಿ 7,239 ಮತಗಳು ಹಾಗೂ ಎರಡನೇ ಸುತ್ತಿನಲ್ಲಿ 7,311 ಮತಗಳ ಎಣಿಕೆ ಪೂರ್ಣಗೊಂಡಿದ್ದು, ಒಟ್ಟು 14,540 ಮತಗಳ ಎಣಿಕೆಯಾಗಿದೆ. ಸುಮಾರು 28 ಸಾವಿರ ಮತಗಳ ಎಣಿಕೆಯ ಪ್ರಕ್ರಿಯೆಯಲ್ಲಿ ನಮೋಶಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ನಮೋಶಿ ಗೆಲುವಿನತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದ ಎದುರು ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಅಧಿಕೃತ ಫಲಿತಾಂಶದ ಘೋಷಣೆ ಬಾಕಿ ಇದ್ದು, ಅಂತಿಮ ಮತಗಳ ವಿವರ ಹಾಗೂ ಗೆಲುವಿನ ಅಂತರದ ಬಗ್ಗೆ ಚುನಾವಣಾಧಿಕಾರಿಗಳ ಪ್ರಕಟಣೆಯ ನಿರೀಕ್ಷೆಯಿದೆ.



