ಹೊಸದಿಗಂತ ವರದಿ ಮಂಗಳೂರು:
ಜಪ್ಪಿನಮೊಗೆರು ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಸಂಚಾರ ದಕ್ಷಿಣ ಪೊಲೀಸ್ ಠಾಣೆಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಉಳ್ಳಾಲ ತಾಲೂಕಿನ ಕೋಟೆಕಾರ್ ಗ್ರಾಮದ ಸಂಕೋಳಿಗೆಯಲ್ಲಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಸಾರ್ವಜನಿಕರು ಇನ್ನುಮುಂದೆ ದೂರುಗಳು ಹಾಗೂ ಇತರ ಪೊಲೀಸ್ ಸೇವೆಗಳಿಗಾಗಿ ಈ ನೂತನ ವಿಳಾಸವನ್ನು ಸಂಪರ್ಕಿಸಬಹುದಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಈ ಠಾಣೆಯು ಹಿಂದೆ ಜಪ್ಪಿನಮೊಗೆರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ-66ರ ಸಮೀಪ, ವಾಹನ ಗ್ಯಾರೇಜ್ ಮಾಲಕರ ಸಂಘದ ಬಳಿಯ ಖಾಸಗಿ ಕಟ್ಟಡದಲ್ಲಿ ಸಂಚಾರ ದಕ್ಷಿಣ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಠಾಣೆಯ ಕಾರ್ಯನಿರ್ವಹಣೆಗೆ ಇನ್ನಷ್ಟು ಅನುಕೂಲವಾಗುವಂತೆ ಡೋರ್ ನಂ. 5-78, ಪುಷ್ಪ ನಿವಾಸ, ಶ್ರೀ ಕೃಷ್ಣ ಕಲ್ಯಾಣ ಮಂಟಪದ ಎದುರುಗಡೆ, ಸಂಕೋಳಿಗೆ, ಕೋಟೆಕಾರ್ ಗ್ರಾಮ, ಉಳ್ಳಾಲ ತಾಲೂಕು – 575023. ವಿಳಾಸದಲ್ಲಿ ಕಾರ್ಯಾಚರಿಸಲಿದೆ.
ಠಾಣೆಯನ್ನು ದೂರವಾಣಿ ಸಂಖ್ಯೆ 0824-2220850, ಮೊಬೈಲ್ ಸಂಖ್ಯೆ: 9480805371ರಲ್ಲಿ ಸಂಪರ್ಕಿಸಬಹುದಾಗಿದೆ.
ಸಂಚಾರ ದಕ್ಷಿಣ ಪೊಲೀಸ್ ಠಾಣೆಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು, ಸಂಚಾರ ಸಮಸ್ಯೆಗಳ ಕುರಿತು ಮಾಹಿತಿ ನೀಡಲು ಹಾಗೂ ಇತರ ಪೊಲೀಸ್ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಇನ್ನು ಮುಂದೆ ಹೊಸ ವಿಳಾಸಕ್ಕೆ ಭೇಟಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.



