October 28, 2026
Wednesday, October 28, 2026
spot_img

ನಾಲ್ಕು ಪರಿಷತ್ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ: ಅರವಿಂದ ಬೆಲ್ಲದ

ಹೊಸದಿಗಂತ ವರದಿ ಹುಬ್ಬಳ್ಳಿ:

ವಿಧಾನ ಪರಿಷತ್ ನಾಲ್ಕು ಕ್ಷೇತ್ರದ ಚುನಾವಣೆಯಲ್ಲಿ ಸೋಲಿಸುವ ಮೂಲಕ ಎಡಪಂಥೀಯ ವಿಚಾರಧಾರೆ ಹಾಗೂ ದೇಶ ವಿರೋಧಿ ಶಕ್ತಿಗಳಿಗೆ ಪೂರಕವಾಗಿ ಕೆಲಸ ಮಾಡುವ ಕಾಂಗ್ರೆಸ್‌ಗೆ ಪ್ರಬುದ್ಧ ಮತದಾರರು ಮುಖ ಭಂಗ ಮಾಡಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಉದ್ಯೋಗ ಮಾಡಿಕೊಂಡ, ರಾಜ್ಯದಲ್ಲಿ ನಕಾರಾತ್ಮಕ ಹಾಗೂ ದ್ವಂದ ನೀತಿ ಜನ ಸರ್ಕಾರ ನೀಡಲ್ಲ ಎಂದು ತೋರಿಸಿದ್ದಾರೆ. ವಿದೇಶದಿಂದ ಹಣ ಪಡೆದು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕಾಂಗ್ರೆಸ್‌ಗೆ ಮತದಾರರ ಬುದ್ಧಿ ಕಲಿಸಿ ದೇಶಪರವಿದ್ದೇವೆ ಎಂದು ಸಾರಿದ್ದಾರೆ ಎಂದು ತಿಳಿಸಿದರು.

Must Read