October 29, 2026
Thursday, October 29, 2026
spot_img

ಎಕ್ಸ್‌ಪ್ರೆಸ್‌ವೇನಲ್ಲಿ 120 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಿದರೆ ದಂಡವಿಲ್ಲ : ಗಡ್ಕರಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಕ್ಸ್‌ಪ್ರೆಸ್‌ವೇಗಳಲ್ಲಿ 120 ಕಿ.ಮೀ ವೇಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ದಂಡ ವಿಧಿಸುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮಹತ್ವದ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿ, ರಸ್ತೆಗಳಲ್ಲಿ ನಿಗದಿಪಡಿಸಿರುವ ವೇಗಕ್ಕಿಂತ ಶೇ. 20ರಷ್ಟು ಹೆಚ್ಚು ಸ್ಪೀಡ್‌ನಲ್ಲಿ ವಾಹನ ಚಲಾವಣೆ ಮಾಡಿದರೂ ಅವರಿಗೆ ಫೈನ್‌ ಹಾಕಬಾರದು. ಅದಕ್ಕಿಂತ ಹೆಚ್ಚು ಮಾಡಿದಲ್ಲಿ ಫೈನ್‌ ಹಾಕಬಹುದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೆದ್ದಾರಿಗಳಲ್ಲಿ ಸ್ವಲ್ಪ ಸ್ಪೀಡ್‌ ಜಾಸ್ತಿ ಆದರೂ ಫೈನ್‌ ಕಟ್ಟಬೇಕಲ್ಲ ಎಂದುಕೊಂಡ ವಾಹನಸವಾರರಿಗೆ ಸ್ವಲ್ಪ ನಿರಾಳವಾಗಿದೆ.

ಹೆದ್ದಾರಿಗಳಲ್ಲಿ ವೇಗದ ಕಾರಣಕ್ಕೆ ಹಲವರಿಗೆ ನೋಟಿಸ್‌ಗಳು ತಲುಪುತ್ತಿವೆ. 120 ಕಿ.ಮೀ. ವೇಗದವರೆಗೆ ಯಾವುದೇ ನೋಟಿಸ್ ಕಳುಹಿಸಬಾರದು ಎಂದು ನಾನು ಸೂಚಿಸಿದ್ದೇನೆ. ಅಷ್ಟೇ ಅಲ್ಲದೆ, 120 ಕಿ.ಮೀ.ಗಿಂತ ಶೇ. 20ರಷ್ಟು ವೇಗ ಹೆಚ್ಚಿದ್ದರೂ ಅಂಥವರಿಗೆ ರಿಯಾಯಿತಿ ನೀಡಿ ಬಿಡಬೇಕು. ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವವರಿಗೆ ಮಾತ್ರ ಚಲನ್ ವಿಧಿಸಬೇಕು ಎಂದು ಗಡ್ಕರಿ ಸ್ಪಷ್ಟಪಡಿಸಿದರು.

Must Read