October 30, 2026
Friday, October 30, 2026
spot_img

ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ ಪ್ರಕರಣ: ಮತ್ತೋರ್ವ ಆರೋಪಿ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಟೈಗರ್‌ ಶ್ರಾಫ್‌ ಅವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಪೊಲೀಸರ ಅಪರಾಧ ವಿಭಾಗವು ಹರಿಯಾಣದ ಸೋನಿಪತ್‌ ಜಿಲ್ಲೆಯಿಂದ 12ನೇ ಆರೋಪಿ ಅಮನ್‌ ಎಂಬಾತನನ್ನು ಬಂಧಿಸಿದೆ. ಈಗಾಗಲೇ ಬಂಧನಕ್ಕೊಳಗಾಗಿರುವ ಕುನಾಲ್‌ ಜಮಿನ್‌ಸಿಂಗ್‌ ಹಾಗೂ ಈಗ ಅರೆಸ್ಟ್‌ ಆಗಿರುವ ಅಮನ್‌ ಆಪ್ತರಾಗಿದ್ದಾರೆ. ಕೃತ್ಯಕ್ಕೆ ಕುನಾಲ್‌ ಬಳಸಿದ್ದ ಟರ್ಕಿ ನಿರ್ಮಿತ ಝಿಗಾನಾ ಪಿಸ್ತೂಲ್‌ನ್ನು ಅಮನ್‌ ಕೊಟ್ಟಿದ್ದು ಎಂದು ಆರೋಪಿಸಲಾಗಿದೆ.

ಹರಿಯಾಣ ಪೊಲೀಸರ ಸಹಯೋಗದೊಂದಿಗೆ ಸೋನಿಪತ್ ಜಿಲ್ಲೆಯ ಖಾರ್ಖೋಡಾ ತಹಸಿಲ್ ವ್ಯಾಪ್ತಿಯ ರೋಹ್ನಾ ಗ್ರಾಮದಿಂದ ಅಮನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೆಂದು ಶಂಕಿಸಲಾದ ಅನಿಲ್ ಪಂಡಿತ್ ಎಂಬಾತನಿಂದ ಅಮನ್ ತನ್ನ ಬ್ಯಾಂಕ್ ಖಾತೆಗೆ ಹಣ ಪಡೆದಿದ್ದನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ, ನಟನ ಮೇಲಿನ ದಾಳಿಯ ಹೊಣೆಯನ್ನು ಅನಿಲ್ ಪಂಡಿತ್ ತಾನೇ ಹೊತ್ತುಕೊಂಡಿದ್ದ.

ಅಮನ್‌ ಖಾತೆಯಲ್ಲಿದ್ದ ಹಣವನ್ನು ಡ್ರಾ ಮಾಡಿ ಕುನಾಲ್‌ ಜಮ್‌ಶಿಂಗ್‌ಗೆ ನೀಡಲಾಗಿತ್ತು. ಇದನ್ನು ಬಳಸಿ ಶಸ್ತ್ರಾಸ್ತ್ರವನ್ನು ಖರೀದಿ ಮಾಡಿರಬಹುದು ಎಂದು ಹೇಳಲಾಗಿದೆ.

Must Read