ಹೊಸದಿಗಂತ ವರದಿ ಅಂಕೋಲಾ:
ಅಂಕೋಲಾ ತಾಲೂಕಿನ ವಂದಿಗೆ ಗ್ರಾಮದ ಹನುಮಟ್ಟಾದ ಶ್ರೀಲಕ್ಷ್ಮೀನಾರಾಯಣ ಮಹಾಮಾಯ ದೇವಾಲಯದಲ್ಲಿ ಆಶ್ವೀನ ವದ್ಯ ಪಂಚಮಿ ಉತ್ಸವ ಸಂಭ್ರಮದಿಂದ ನಡೆಯಿತು.
ದೇವಾಲಯದ ಆವರಣದಲ್ಲಿರುವ ಶ್ರೀಭಗವತಿ ಸನ್ನಿಧಿಯಲ್ಲಿ ಕುದಿಯುವ ಎಣ್ಣೆ ಕಾವಲಿಯಿಂದ ವಡೆ ತೆಗೆಯುವ ಧಾರ್ಮಿಕ ವಿಧಿ ಸಂಪ್ರದಾಯದಂತೆ ನೆರವೇರಿತು.
ಗೋವಾ,ಮಹಾರಾಷ್ಟ್ರ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ದೇವಾಲಯದ ಕುಳಾವಿಗಳು ಆಗಮಿಸಿ ದೇವರ ಸನ್ನಿಧಿಯಲ್ಲಿ ವಿವಿಧ ಸೇವಾ ಕಾರ್ಯಗಳನ್ನು ನೆರವೇರಿಸಿದರು.
ಸಂಜೆ ನಡೆದ ಅನ್ನ ಸಂತರ್ಪಣೆಯಲ್ಲಿ ತಾಲೂಕಿನ ಮತ್ತು ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಅನ್ನ ಪ್ರಸಾದ ಮತ್ತು ವಡೆ ಪ್ರಸಾದ ಸ್ವೀಕರಿಸಿದರು. ಶ್ರೀಲಕ್ಷ್ಮೀನಾರಾಯಣ ಮಹಾಮಾಯ ಸನ್ನಿಧಿಯಲ್ಲಿ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಜೆ ದೇವರ ರಥೋತ್ಸವ ನೆರವೇರಿತು.



