ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ನಾಡು, ನುಡಿ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 71 ಗಣ್ಯರಿಗೆ 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.
ರಾಜ್ಯೋತ್ಸವದ 71ನೇ ವರ್ಷದ ಹಿನ್ನೆಲೆಯಲ್ಲಿ ಒಟ್ಟು 71 ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಈ ಬಾರಿ ಜಾನಪದ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಏಳು ಮಂದಿಗೆ ಪ್ರಶಸ್ತಿ ಲಭಿಸಿದೆ. ಸಂಗೀತ ಕ್ಷೇತ್ರದ ಮೂವರು, ನೃತ್ಯ ವಿಭಾಗದ ಒಬ್ಬರು, ಚಲನಚಿತ್ರ ಮತ್ತು ಕಿರುತೆರೆ ವಿಭಾಗದ ಮೂವರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಲಾಗಿದೆ. ಒಟ್ಟು 12 ಮಹಿಳೆಯರು ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿರುವುದು ವಿಶೇಷ.
ಯಾವ ಕ್ಷೇತ್ರದ ಸಾಧಕರಿಗೆ ಮನ್ನಣೆ?
ಯಕ್ಷಗಾನ, ಬಯಲಾಟ, ರಂಗಭೂಮಿ, ಶಿಲ್ಪಕಲೆ, ಚಿತ್ರಕಲೆ, ಕರಕುಶಲ, ಕೃಷಿ, ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಧ್ಯಮ, ಸಮಾಜಸೇವೆ, ವೈದ್ಯಕೀಯ, ಆಡಳಿತ, ಇಂಜಿನಿಯರಿಂಗ್, ಸಾಹಿತ್ಯ, ಶಿಕ್ಷಣ, ನ್ಯಾಯಾಂಗ ಹಾಗೂ ಕ್ರೀಡಾ ಕ್ಷೇತ್ರಗಳ ಸಾಧಕರಿಗೂ ಪ್ರಶಸ್ತಿ ಘೋಷಿಸಲಾಗಿದೆ.
ಪ್ರಶಸ್ತಿ ನಿರಾಕರಿಸಿದ ವಾಟಾಳ್ ನಾಗರಾಜ್
ಈ ಬಾರಿ ವಾಟಾಳ್ ನಾಗರಾಜ್ ಅವರ ಹೆಸರನ್ನೂ ಪ್ರಶಸ್ತಿಗೆ ಪರಿಗಣಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದರು. ಆದರೆ, ತಮಗೆ ಪ್ರಶಸ್ತಿ ಬೇಡ, ಕನ್ನಡ ಉಳಿಸುವ ಕೆಲಸ ಮುಂದುವರಿಸಿ ಎಂದು ಅವರು ತಿಳಿಸಿದ್ದಾರೆ.
ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ 25 ಗ್ರಾಂ ಚಿನ್ನವನ್ನು ಒಳಗೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ನಾಡಿನ ಸೇವೆಗೆ ತಮ್ಮದೇ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ರಾಜ್ಯೋತ್ಸವ ಪ್ರಶಸ್ತಿ ಮತ್ತೊಮ್ಮೆ ಕನ್ನಡಿಗರ ಸಾಧನೆಗೆ ಮನ್ನಣೆ ನೀಡಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ
- ದಾವಲಸಾಬ ಅತ್ತಾರ – ಜಾನಪದ ಕ್ಷೇತ್ರ, ಕೊಪ್ಪಳ
- ಗೌರಮ್ಮ – ಜಾನಪದ ಕ್ಷೇತ್ರ, ಚಾಮರಾಜನಗರ
- ಪಾಂಡಪ್ಪ ದೇವಲಪ್ಪ ಲಮಾಣಿ – ಜಾನಪದ ಕ್ಷೇತ್ರ, ಗದಗ
- ಎ.ಆರ್. ಸತ್ಯನಾರಾಯಣ – ಜಾನಪದ ಕ್ಷೇತ್ರ, ಬೆಂಗಳೂರು ದಕ್ಷಿಣ
- ಈರಣ್ಣ ರುದ್ರಾಕ್ಷಿ – ಜಾನಪದ ಕ್ಷೇತ್ರ, ರಾಯಚೂರು
- ಶಿವಲಿಂಗಪ್ಪ ತಂದೆ ರಾಮಣ್ಣ – ಜಾನಪದ ಕ್ಷೇತ್ರ, ಕೊಪ್ಪಳ
- ಸುರೇಶ್ ರಾಮಚಂದ್ರ ಜೋಶಿ – ಜಾನಪದ ಕ್ಷೇತ್ರ, ವಿಜಯಪುರ
- ಡಾ. ಸಿ.ಎ. ಶ್ರೀಧರ್ – ಸಂಗೀತ ಕ್ಷೇತ್ರ, ಮೈಸೂರು
- ಡಾ. ಎ. ನಾರಾಯಣಸ್ವಾಮಿ – ಸಂಗೀತ ಕ್ಷೇತ್ರ, ಹಾಸನ
- ಬಿ. ಮುರುಳಿ – ಸಂಗೀತ ಕ್ಷೇತ್ರ, ಬೆಂಗಳೂರು ಗ್ರಾಮಾಂತರ
- ಡಾ. ಸತ್ಯನಾರಾಯಣ ರಾಜು – ನೃತ್ಯ ಕ್ಷೇತ್ರ, ಬೆಂಗಳೂರು ನಗರ
- ಬಾಬಜೀ ವೆಂಕಟರಮಣ – ಚಲನಚಿತ್ರ ಕ್ಷೇತ್ರ, ಧಾರವಾಡ
- ಅಶೋಕ್ – ಚಲನಚಿತ್ರ ಕ್ಷೇತ್ರ, ಬೆಂಗಳೂರು ಗ್ರಾಮಾಂತರ
- ಕೆ.ಎಸ್. ರವೀಂದ್ರನಾಥ್ – ಕಿರುತೆರೆ ಕ್ಷೇತ್ರ, ಬೆಂಗಳೂರು ನಗರ
- ಗೋಪಾಲ ಗಾಣಿಗ – ಯಕ್ಷಗಾನ ಕ್ಷೇತ್ರ, ಉಡುಪಿ
- ಹುಲಿಗೆಮ್ಮ – ಬಯಲಾಟ ಕ್ಷೇತ್ರ, ಬಳ್ಳಾರಿ
- ಡಿ. ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ – ರಂಗಭೂಮಿ, ಬೆಂಗಳೂರು ಗ್ರಾಮಾಂತರ
- ಕೆ. ಜಯಲಕ್ಷ್ಮಿ ಪಾಟೀಲ್ – ರಂಗಭೂಮಿ, ಧಾರವಾಡ
- ಜಿ.ಡಿ. ತಿಮ್ಮಯ್ಯ – ರಂಗಭೂಮಿ, ಚಿತ್ರದುರ್ಗ
- ಕೆ.ಆರ್. ಸುಮತಿ – ರಂಗಭೂಮಿ, ಮೈಸೂರು
- ಹೆಚ್.ವಿ. ಪುಟ್ಟವೀರಪ್ಪ – ರಂಗಭೂಮಿ, ಬೆಂಗಳೂರು ದಕ್ಷಿಣ
- ಹೊನ್ನ ನಾಯಕ್ – ರಂಗಭೂಮಿ, ಮೈಸೂರು
- ಜಿ.ವಿ. ಹಂಸಾನಂದ ಆಚಾರ್ಯ – ಶಿಲ್ಪಕಲೆ, ವಿಜಯನಗರ
- ಕಾಡಪ್ಪ – ಶಿಲ್ಪಕಲೆ, ಬೆಳಗಾವಿ
- ಸಿ.ಬಿ. ಸೋಮಶೆಟ್ಟಿ – ಚಿತ್ರಕಲೆ, ಬೀದರ್
- ಶಾಂತಾಬಾಯಿ ಮೋಹನ್ ಕಾಂಬಳೆ – ಕರಕುಶಲ, ಬೀದರ್
- ಹೆಚ್.ಕೆ. ಶ್ರೀಕಂಠು – ಕೃಷಿ ಕ್ಷೇತ್ರ, ಬೆಂಗಳೂರು ದಕ್ಷಿಣ
- ಬಿ.ಎ. ಚನ್ನಪ್ಪಗೌಡ – ಕೃಷಿ ಕ್ಷೇತ್ರ, ಬೆಂಗಳೂರು ನಗರ
- ಡಾ. ಸ್ವಾಮಿ ಆನಂದ್ ಆರ್. – ಪರಿಸರ ಕ್ಷೇತ್ರ, ಮೈಸೂರು
- ಪ್ರೊ. ರಾಜಾಸಾಬ್ ಎ.ಎಚ್. – ವಿಜ್ಞಾನ ಮತ್ತು ತಂತ್ರಜ್ಞಾನ, ಕಲಬುರಗಿ
- ಡಾ. ರಾಜಶೇಖರ ಮೂರ್ತಿ – ವಿಜ್ಞಾನ ಮತ್ತು ತಂತ್ರಜ್ಞಾನ, ಕೆನಡಾ
- ಉಮಾಪತಿ – ಮಾಧ್ಯಮ ಕ್ಷೇತ್ರ, ಚಿತ್ರದುರ್ಗ
- ಎಂ.ಪಿ. ಸುಶೀಲ – ಮಾಧ್ಯಮ ಕ್ಷೇತ್ರ, ಬೆಂಗಳೂರು ನಗರ
- ವಿಶ್ವನಾಥ್ ಸುವರ್ಣ – ಮಾಧ್ಯಮ/ಛಾಯಾಚಿತ್ರ, ದಕ್ಷಿಣ ಕನ್ನಡ
- ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ – ಸಂಕೀರ್ಣ, ಬಾಗಲಕೋಟೆ
- ಡಿ.ಎಸ್. ಚೌಗಲೆ – ಸಂಕೀರ್ಣ, ಬೆಳಗಾವಿ
- ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ – ಸಂಕೀರ್ಣ, ಬೆಂಗಳೂರು ನಗರ
- ಬಿ.ಪಿ. ಆರಾಧ್ಯ – ಸಂಕೀರ್ಣ/ವಾಸ್ತುಶಾಸ್ತ್ರ, ಬೆಂಗಳೂರು ದಕ್ಷಿಣ
- ರವಿ ಪ್ರವೀಣ್ ನೊರೋನಾ – ಸಂಕೀರ್ಣ, ಬೆಂಗಳೂರು ನಗರ
- ಎಂ.ಆರ್. ಜೈಶಂಕರ್ – ಸಂಕೀರ್ಣ, ಚಿಕ್ಕಮಗಳೂರು
- ಪ್ರಸಾದ್ ಬಿಡ್ಡಪ್ಪ – ಸಂಕೀರ್ಣ, ಕೊಡಗು
- ವಾಸಪ್ಪ ಯಲ್ಲಪ್ಪ ಕುಸಗೂರ – ಸಂಕೀರ್ಣ, ಹಾವೇರಿ
- ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ – ಸಮಾಜಸೇವೆ, ಗದಗ
- ಬಸವರಾಜು – ಸಮಾಜಸೇವೆ, ಮಂಡ್ಯ
- ಕಾಗೋಡು ತಿಮ್ಮಪ್ಪ – ಸಮಾಜಸೇವೆ, ಶಿವಮೊಗ್ಗ
- ಡಾ. ಎಸ್.ಎಂ. ಎಲಿ – ಸಮಾಜಸೇವೆ, ದಾವಣಗೆರೆ
- ಡಾ. ಜಿ.ಎಸ್. ಚಂದ್ರಶೇಖರ್ (ಆದರ್ಶ ಚಾರಿಟಬಲ್ ಟ್ರಸ್ಟ್) – ಸಮಾಜಸೇವೆ, ಉತ್ತರ ಕನ್ನಡ
- ಡಾ. ಶಿವಾನಂದ ಮಹಾಸ್ವಾಮಿ – ಸಮಾಜಸೇವೆ, ಕಲಬುರಗಿ
- ಕೃಷ್ಣೇಗೌಡ ಬಿನ್ ವೆಂಕಟರಾಯಪ್ಪ – ಸಮಾಜಸೇವೆ, ಚಿಕ್ಕಬಳ್ಳಾಪುರ
- ಎ.ಸಿ. ಭಂಡಾರಿ (ಅಖಿಲ ಭಾರತ ತುಳು ಒಕ್ಕೂಟ) – ಸಮಾಜಸೇವೆ, ದಕ್ಷಿಣ ಕನ್ನಡ
- ಗುರಮ್ಮ ಹಂಪಯ್ಯ ಸಂಕಿನಮಠ – ಸಮಾಜಸೇವೆ, ಬಾಗಲಕೋಟೆ
- ಡಾ. ವಿಜಯೇಂದ್ರ ಹೊನ್ನೂರಪ್ಪ – ವೈದ್ಯಕೀಯ ಕ್ಷೇತ್ರ, ಬೆಂಗಳೂರು ನಗರ
- ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ – ವೈದ್ಯಕೀಯ ಕ್ಷೇತ್ರ, ಬೆಳಗಾವಿ
- ತೆರೆಸಾ ಭಟ್ಟಾಚಾರ್ಯ – ಆಡಳಿತ ಕ್ಷೇತ್ರ, ಬೆಂಗಳೂರು ನಗರ
- ಡಾ. ಕೆ.ಎಸ್. ಸೋಮಶೇಖರ್ – ಆಡಳಿತ ಕ್ಷೇತ್ರ, ಹೊರನಾಡು
- ಡಾ. ಕೆ.ಎನ್. ವೆಂಕಟ ಕೃಷ್ಣರಾವ್ – ಇಂಜಿನಿಯರಿಂಗ್ ಕ್ಷೇತ್ರ, ಚಿಕ್ಕಬಳ್ಳಾಪುರ
- ಡಾ. ಇಂದಿರಾ ಹೆಗಡೆ – ಸಾಹಿತ್ಯ ಕ್ಷೇತ್ರ, ದಕ್ಷಿಣ ಕನ್ನಡ
- ವೀರಹನುಮಾನ್ – ಸಾಹಿತ್ಯ ಕ್ಷೇತ್ರ, ರಾಯಚೂರು
- ಪ್ರೊ. ನಾರಾಯಣಘಟ್ಟ – ಸಾಹಿತ್ಯ ಕ್ಷೇತ್ರ, ತುಮಕೂರು
- ಸಿ. ಮಹೇಶ್ವರಪ್ಪ ಚಟ್ನಳ್ಳಿ – ಸಾಹಿತ್ಯ ಕ್ಷೇತ್ರ, ಚಿಕ್ಕಮಗಳೂರು
- ಡಾ. ಕರೀಗೌಡ ಬೀಚನಹಳ್ಳಿ – ಸಾಹಿತ್ಯ ಕ್ಷೇತ್ರ, ತುಮಕೂರು
- ಡಾ. ಸಿದ್ಧರಾಮ ಹೊನ್ಕಲ್ – ಸಾಹಿತ್ಯ ಕ್ಷೇತ್ರ, ಯಾದಗಿರಿ
- ಫಾ. ಜೋಸೆಫ್ (ಕ್ರೈಸ್ಟ್ ವಿಶ್ವವಿದ್ಯಾಲಯದ ಉಪಕುಲಪತಿ) – ಶಿಕ್ಷಣ ಕ್ಷೇತ್ರ, ಬೆಂಗಳೂರು ನಗರ
- ಶಾಂತಪ್ಪ ದಶವಂತ – ಶಿಕ್ಷಣ ಕ್ಷೇತ್ರ, ವಿಜಯಪುರ
- ಸಂಗೀತಾ ಎನ್. ಕಟ್ಟಿಮನಿ – ಶಿಕ್ಷಣ ಕ್ಷೇತ್ರ, ಕಲಬುರಗಿ
- ಡಾ. ಎನ್.ಎಸ್. ರಂಗರಾಜು – ಶಿಕ್ಷಣ ಕ್ಷೇತ್ರ, ಮೈಸೂರು
- ಬಿ.ವಿ. ಆಚಾರ್ಯ – ನ್ಯಾಯಾಂಗ ಕ್ಷೇತ್ರ, ಉಡುಪಿ
- ರಮೇಶ್ ಗೌಡ (ಮಾಜಿ ಅಧ್ಯಕ್ಷರು, ಅಕ್ಕ ಅಮೆರಿಕಾ) – ಹೊರನಾಡು/ಹೊರದೇಶ
- ಜಿಮ್ ರವಿ – ಕ್ರೀಡಾ ಕ್ಷೇತ್ರ, ಕೋಲಾರ
- ಡಾ. ಎ.ಬಿ. ಸುಬ್ಬಯ್ಯ – ಕ್ರೀಡಾ ಕ್ಷೇತ್ರ, ಕೊಡಗು
- ಎಂ. ಗಿರೀಶ್ – ಕ್ರೀಡಾ ಕ್ಷೇತ್ರ, ಬೆಂಗಳೂರು ನಗರ



