October 31, 2026
Saturday, October 31, 2026
spot_img

Weight Loss | ವಾರದಲ್ಲಿ ತೂಕ ಇಳಿಸಬೇಕೇ? ಹಾಗಾದರೆ ಈ ‘ಪವರ್‌ಫುಲ್’ ಸೂತ್ರ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೊಜ್ಜು ಅಥವಾ ಹೆಚ್ಚಿದ ತೂಕ ಇಂದಿನ ದಿನಗಳಲ್ಲಿ ಅನೇಕರ ದೊಡ್ಡ ತಲೆನೋವು. ಕೆಲವೇ ದಿನಗಳಲ್ಲಿ ಮದುವೆ, ಪಾರ್ಟಿ ಅಥವಾ ವಿಶೇಷ ಕಾರ್ಯಕ್ರಮಗಳಿಗೆ ಸಿದ್ಧವಾಗಲು ಜನರು ಸಾಮಾನ್ಯವಾಗಿ ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳುವುದು ಹೇಗೆ? ಎಂದು ಹುಡುಕಾಟ ನಡೆಸುತ್ತಾರೆ. ಇಂಟರ್ನೆಟ್‌ನಲ್ಲಿ ಸಿಗುವ ವಿಭಿನ್ನ ಡಯಟ್ ಟಿಪ್ಸ್ ನೋಡಿ ಗೊಂದಲಕ್ಕೀಡಾಗುತ್ತಾರೆ. ಹಾಗಾದರೆ, ನಿಜವಾಗಿಯೂ ಕೇವಲ 7 ದಿನಗಳಲ್ಲಿ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ಸಾಧ್ಯವೇ?.

ನಿಜ ಹೇಳಬೇಕೆಂದರೆ, ಕೇವಲ 7 ದಿನಗಳಲ್ಲಿ ನಿಮ್ಮ ದೇಹದ ಶಾಶ್ವತವಾದ ಕೊಬ್ಬನ್ನು ಸಂಪೂರ್ಣವಾಗಿ ಕರಗಿಸಲು ಸಾಧ್ಯವಿಲ್ಲ. ಆದರೆ, ಒಂದು ವಾರದಲ್ಲಿ ನಿಮ್ಮ ದೇಹದಲ್ಲಿ ನೀರು ಶೇಖರಣೆಯಾಗಿ ಉಂಟಾಗುವ ಊತ ಮತ್ತು ಉಬ್ಬಸವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ನೀವು ಕೆಲವೇ ದಿನಗಳಲ್ಲಿ ಸ್ವಲ್ಪ ಸ್ಲಿಮ್ ಆಗಿ ಕಾಣಿಸಿಕೊಳ್ಳಲು ಸಾಧ್ಯವಿದೆ. ತಜ್ಞರ ಪ್ರಕಾರ, ತ್ವರಿತ ಫಲಿತಾಂಶಕ್ಕಾಗಿ ದಿನನಿತ್ಯದ ಜೀವನಶೈಲಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

ಹೆಚ್ಚು ನೀರು ಕುಡಿಯಿರಿ

ಜಂಕ್ ಫುಡ್, ತಿನಿಸುಗಳು, ಸಿಹಿತಿಂಡಿಗಳು ಮತ್ತು ಕೂಲ್ ಡ್ರಿಂಕ್ಸ್ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿ. ದಿನವಿಡೀ ಸಾಕಷ್ಟು ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹೋಗುತ್ತವೆ ಮತ್ತು ಚಯಾಪಚಯ ಕ್ರಿಯೆ ಚುರುಕಾಗುತ್ತದೆ.

ಸಕ್ಕರೆ, ಜಂಕ್ ಫುಡ್‌ಗೆ ಗುಡ್‌ಬೈ

ಹಣ್ಣುಗಳು, ತರಕಾರಿಗಳು ಮತ್ತು ಸೊಪ್ಪುಗಳನ್ನು ನಿಮ್ಮ ಊಟದಲ್ಲಿ ಹೆಚ್ಚಾಗಿ ಬಳಸಿ. ಇದು ನಿಮ್ಮ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಮೈದಾ ಉತ್ಪನ್ನಗಳು, ಕರಿದ ತಿಂಡಿಗಳು ಮತ್ತು ಸಕ್ಕರೆ ಅಂಶವಿರುವ ಪಾನೀಯಗಳನ್ನು ಸಂಪೂರ್ಣವಾಗಿ ದೂರವಿಡಿ. ಇದು ತಕ್ಷಣವೇ ತೂಕ ನಿಯಂತ್ರಣಕ್ಕೆ ಬರುವಂತೆ ಮಾಡುತ್ತದೆ.

ಪ್ರೊಟೀನ್ ಯುಕ್ತ ಆಹಾರ

ಮೊಟ್ಟೆ, ಪನೀರ್, ಬೇಳೆಕಾಳುಗಳಂತಹ ಪ್ರೊಟೀನ್ ಯುಕ್ತ ಆಹಾರಗಳು ತೂಕ ಇಳಿಕೆಗೆ ಸಹಾಯ ಮಾಡುತ್ತವೆ. ನಿಮ್ಮ ಆಹಾರದಲ್ಲಿ ಮೊಟ್ಟೆ, ಪನೀರ್, ಮೊಳಕೆ ಕಾಳುಗಳು ಮತ್ತು ಹಸಿರು ತರಕಾರಿಗಳನ್ನು ಹೆಚ್ಚಾಗಿ ಬಳಸಿ. ಇದು ಹೊಟ್ಟೆ ತುಂಬಿದ ಅನುಭವ ನೀಡುವುದರ ಜೊತೆಗೆ ಹಸಿವನ್ನು ನಿಯಂತ್ರಿಸುತ್ತದೆ.

ಆರೋಗ್ಯವಾಗಿ ತೂಕ ಇಳಿಸಿಕೊಳ್ಳಲು ನೀರು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವೊಮ್ಮೆ ನಮಗೆ ಹಸಿವಾದಂತೆ ಅನ್ನಿಸುವುದು ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಆಗಿರಬಹುದು. ಆದ್ದರಿಂದ ದಿನಕ್ಕೆ ಕನಿಷ್ಠ 8 ರಿಂದ 10 ಗ್ಲಾಸ್ ನೀರು ಕುಡಿಯುವುದನ್ನು ಮರೆಯದಿರಿ. ಆಹಾರದ ಜೊತೆಗೆ ದೈಹಿಕ ಚಟುವಟಿಕೆಯೂ ಅಷ್ಟೇ ಮುಖ್ಯ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವೇಗವಾಗಿ ನಡೆಯುವುದು, ಯೋಗ ಅಥವಾ ಲಘು ವ್ಯಾಯಾಮ ಮಾಡುವುದು ದೇಹದ ಕ್ಯಾಲೊರಿಗಳನ್ನು ಬೇಗನೆ ಕರಗಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ರಾತ್ರಿ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಗಾಢ ನಿದ್ರೆ ಮಾಡುವುದು ತೂಕ ಇಳಿಕೆಗೆ ಅತ್ಯಂತ ಅವಶ್ಯಕವಾಗಿದೆ.

ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳುವುದು ಕೇವಲ ತಾತ್ಕಾಲಿಕ ಪರಿಹಾರ ಮಾತ್ರ. ಶಾಶ್ವತವಾಗಿ ಆರೋಗ್ಯವಾಗಿರಲು ಮತ್ತು ದೇಹದ ತೂಕವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸರಿಯಾದ ಆಹಾರ ಪದ್ಧತಿ ಮತ್ತು ನಿತ್ಯದ ವ್ಯಾಯಾಮವನ್ನು ದೀರ್ಘಕಾಲದವರೆಗೆ ರೂಢಿಸಿಕೊಳ್ಳುವುದು ಅತ್ಯಂತ ಉತ್ತಮ ಮಾರ್ಗವಾಗಿದೆ.

Must Read