ಬೇಕಾಗುವ ಪದಾರ್ಥಗಳು
ಎಳನೀರು
ಹಾಲು
ಸಕ್ಕರೆ
ಏಲಕ್ಕಿ ಪುಡಿ
ಐಸ್ ಕ್ಯೂಬ್ಸ್
ಮಾಡುವ ವಿಧಾನ
ಮೊದಲು ಎಳನೀರಿನಿಂದ ನೀರನ್ನು ಪ್ರತ್ಯೇಕ ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ. ನಂತರ ಎಳನೀರಿನ ಒಳಭಾಗದಲ್ಲಿರುವ ಮೃದುವಾದ ಬಿಳಿ ತಿರುಳನ್ನು ಸೌಟಿನ ಸಹಾಯದಿಂದ ನಿಧಾನವಾಗಿ ಕೆರೆದು ತೆಗೆಯಿರಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಳನೀರಿನ ತಿರುಳು, ಸಕ್ಕರೆ ಮತ್ತು ಸ್ವಲ್ಪ ತಣ್ಣನೆಯ ಹಾಲು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಉಳಿದ ಎಳನೀರಿನ ನೀರು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತೊಮ್ಮೆ ಒಂದೆರಡು ನಿಮಿಷ ಮಿಕ್ಸಿಯಲ್ಲಿ ತಿರುಗಿಸಿ. ಈಗ ಗ್ಲಾಸ್ಗೆ ಸ್ವಲ್ಪ ಐಸ್ ಕ್ಯೂಬ್ಸ್ ಹಾಕಿ, ತಯಾರಿಸಿರುವ ಎಳನೀರು ಮಿಲ್ಕ್ಶೇಕ್ ಅನ್ನು ಅದಕ್ಕೆ ಸುರಿಯಿರಿ. ಈಗ ರುಚಿಕರವಾದ ಎಳನೀರು ಮಿಲ್ಕ್ ಶೇಕ್ ಸಿದ್ಧ!



