October 31, 2026
Saturday, October 31, 2026
spot_img

ಮಡಿಕೇರಿಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ: 4.04 ಲಕ್ಷ ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

ಹೊಸದಿಗಂತ ವರದಿ ಮಡಿಕೇರಿ:

ನಗರದಲ್ಲಿ ಮಾದಕ‌ ವಸ್ತು (ಎಂಡಿಎಂಎ‌) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 4.04 ಲಕ್ಷ ರೂ. ಮೌಲ್ಯದ 11 ಗ್ರಾಂ ಎಂಡಿಎಂಎ ಮಾದಕ ಪದಾರ್ಥ, 5 ಮೊಬೈಲ್, ತಲಾ ಒಂದು ಆಟೋ ರಿಕ್ಷಾ, ತೂಕದ ಯಂತ್ರ ಹಾಗೂ ಬ್ಯಾಗ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ನಗರದ ಗೌಳಿಬೀದಿ ನಿವಾಸಿ, ಆಟೋ ಚಾಲಕ ರುಹೇಜ್ (29) ಹಾಗೂ ಮಾರ್ಕೇಟ್ ಬಳಿಯ ನಿವಾಸಿ, ಬಿಬಿಎ ವಿದ್ಯಾರ್ಥಿ ಮಹಮ್ಮದ್ ಶಾಕೀಜ್(19) ಎಂದು ಗುರುತಿಸಲಾಗಿದೆ.

ನಗರದ ಗೌಳಿಬೀದಿಯ ಕಂಚಿಕಾಮಾಕ್ಷಿ ದೇವಾಲಯದ ಬಳಿಯ ಸಾರ್ವಜನಿಕ ಮೈದಾನದಲ್ಲಿ ಇಬ್ಬರು ಆರೋಪಿಗಳು ಹಾಗೂ ಮತ್ತೋರ್ವ ಅಪರಿಚಿತ ವ್ಯಕ್ತಿ ಕೆ.ಎ 12ಬಿ 5552ರ ಆಟೋ ರಿಕ್ಷಾವನ್ನು ನಿಲ್ಲಿಸಿಕೊಂಡು, ತಮ್ಮ ವಶದಲ್ಲಿ ಎಂಡಿಎಂಎ ಮಾದಕ ಪದಾರ್ಥವನ್ನು ಇಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಗುಪ್ತ ಕರ್ತವ್ಯದ ಸಿಬ್ಬಂದಿ ಮಾಹಿತಿ ಸಂಗ್ರಹಿಸಿ ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದರು.

ಅದರನ್ವಯ ಕಾರ್ಯ ಪ್ರವೃತ್ತರಾದ ಪೊಲೀಸರು‌ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:

ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪ ವಿಭಾಗ ಡಿವೈಎಸ್ಪಿ ಸೂರಜ್ ಪಿ.ಎ, ಮಡಿಕೇರಿ ವೃತ್ತ ನಿರೀಕ್ಷಕ ಚಂದ್ರಶೇಖರ್.ಹೆಚ್.ವಿ, ಠಾಣಾಧಿಕಾರಿ ಸಿ.ವಿ.ಶ್ರೀಧರ, ಸಿಬ್ಬಂದಿಗಳಾದ ಕೃಷ್ಣಮೂರ್ತಿ, ರಾಜೇಶ್ ಬಿ.ಕೆ, ಪುಂಡರೀಕಾಕ್ಷ ಪಿ.ಆರ್, ರೋಹಿತ್ ಕೆ.ಬಿ, ಪ್ರದೀಪ ಕುಮಾರ್ ಎಂ.ಎನ್, ಪ್ರಸಾದ್‌ ಕುಮಾರ್ ಹೆಚ್.ಆರ್, ಪ್ರಸನ್ನ ಹಾಗೂ ಸಿದ್ದಲಿಂಗಪ್ಪ ರಾಗಿ ಪಾಲ್ಗೊಂಡಿದ್ದರು.

Must Read