November 1, 2026
Sunday, November 1, 2026
spot_img

ದಿನಭವಿಷ್ಯ: ನೀವು ಬಯಸದ ಕೆಲವು ಬೆಳವಣಿಗೆಗಳು ಸಂಭವಿಸಬಹುದು, ಮನಸ್ಸಿಗೆ ನೆಮ್ಮದಿ ಸಿಗಲಿದೆ

ಮೇಷ
ನೀವು ಬಯಸದ ಬೆಳವಣಿಗೆ ಸಂಭವ. ಆದರೆ  ಸ್ಥೈರ್ಯ  ಕಳಕೊಳ್ಳದಿರಿ. ಹೊಂದಿಕೊಂಡು ನಡೆಯಿರಿ. ಆರ್ಥಿಕ ಕೊರತೆ ನೀಗಲಿದೆ. ದೂರದ ಬಂಧು ಭೇಟಿ.
ವೃಷಭ
ಪ್ರಮುಖ ಕಾರ್ಯ ಯೋಜಿಸಿದ್ದರೆ ಇಂದೇ ಕಾರ್ಯಗತ ಮಾಡಿ. ಪರಿಸ್ಥಿತಿ ಪ್ರಶಸ್ತವಿದೆ. ಕೌಟುಂಬಿಕ ವಾಗ್ವಾದ ನಡೆದರೂ ಬಳಿಕ ಶಾಂತಿ.      
ಮಿಥುನ
ಆಶಾವಾದದ ದಿನ. ಆರ್ಥಿಕ ಪ್ರಗತಿ.   ಅನಿರೀಕ್ಷಿತ ಧನ ಸಂಚಯ. ವಿದ್ಯಾರ್ಥಿಗಳಿಗೆ ಪೂರಕ. ಕಾಡುವ ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ.  
ಕಟಕ
ನೆಮ್ಮದಿ ಕಳಕೊಳ್ಳುವ ಪ್ರಸಂಗ ಉಂಟಾದೀತು. ನಿಮ್ಮ ಕೆಲಸ ಸಾಽಸಲು ಹೆಚ್ಚಿನ ಶ್ರಮ ಬೇಕು. ಸಂಜೆಗೆ ಮನೆಯ ಪರಿಸ್ಥಿತಿ ಮರಳಿ ಸಹಜ ಸ್ಥಿತಿಗೆ.    
ಸಿಂಹ
ಮನೆಯವರ ಮಾತುಗಳಿಗೆ ಸಹನೆ ಯಿಂದ ಕಿವಿಗೊಡಿ. ಸೌಹಾರ್ದ ವಾತಾವರಣ ಕಾಪಾಡಿ. ವಾಗ್ವಾದದಿಂದ ಲಾಭವಿಲ್ಲ.  
ಕನ್ಯಾ
ಸಂತೋಷ ಮತ್ತು ಬೇಸರ ಎರಡಕ್ಕೂ ಸಾಕ್ಷಿಯಾಗುವಿರಿ.  ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಆರೋಗ್ಯಕ್ಕೆ ಗಮನ ಕೊಡಿ.  
ತುಲಾ
ನೆಮ್ಮದಿ ದೂರ ಮಾಡುವ ಬೆಳವಣಿಗೆ. ನಿಮ್ಮ ಧೋರಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ. ಜಿಗುಟತನ ಬೇಡ. ಆರ್ಥಿಕ ಉನ್ನತಿ.  
ವೃಶ್ಚಿಕ
ಮಾನಸಿಕ ಒತ್ತಡ ಹೆಚ್ಚಿಸುವ ಬೆಳವಣಿಗೆ.  ಧಾರ್ಮಿಕ ಕಾರ್ಯ ಈ ಒತ್ತಡ ಶಮನಕ್ಕೆ ನೆರವಾಗಲಿದೆ. ಪ್ರೀತಿಯಲ್ಲಿ ಮಹತ್ವದ ಬೆಳವಣಿಗೆ.
ಧನು
ಭಾವನಾತ್ಮಕ ನಿಯಂತ್ರಣ ಸಾಽಸಿ. ಪ್ರಾಕ್ಟಿಕಲ್ ಆಗಿ ಯೋಚಿಸಿ. ನಿಮ್ಮ ನೆಮ್ಮದಿ ಕೆಡಿಸಲು ಕೆಲವರ ಯತ್ನ. ಅದಕ್ಕೆ ಅವಕಾಶ ನೀಡದಿರಿ.    
ಮಕರ
ಬಿಕ್ಕಟ್ಟು ಬಂದರೆ  ಕ್ಷಿಪ್ರವಾಗಿ ಸ್ಪಂದಿಸಿ. ವಿಳಂಬ ಧೋರಣೆ ಸಲ್ಲದು. ಪ್ರತಿಕೂಲ ಸನ್ನಿವೇಶಕ್ಕೆ ಧೈರ್ಯಗೆಡದಿರಿ. ಸೂಕ್ತ ನೆರವೂ ಲಭಿಸಲಿದೆ.    
ಕುಂಭ
ಈ ದಿನ ನಿಮಗೆ ಪೂರಕವಾಗಿಲ್ಲ. ಸಂಬಂಧದಲ್ಲಿ ಬಿರುಕು ಮೂಡಬಹುದು. ಉದ್ಯಮದಲ್ಲಿ ಹಿನ್ನಡೆ. ಆರೋಗ್ಯ ಸಮಸ್ಯೆ.
ಮೀನ
ನಿಮಗೆ ಪೂರಕ ದಿನ. ಕಾರ್ಯದಲ್ಲಿ ಪ್ರಗತಿ. ಮನೆಯಲ್ಲಿ ಹೆಚ್ಚುವರಿ ಹೊಣೆ. ಅದನ್ನು ಸರಿಯಾಗಿ ನಿಭಾಯಿಸಲು ಶಕ್ತರಾಗುವಿರಿ.  

Must Read