November 1, 2026
Sunday, November 1, 2026
spot_img

ಫಿಟ್ & ಫುಡ್ 01 | ಗರಿಗರಿಯಾದ ಅವಲಕ್ಕಿ ದೋಸೆ.. ಬೆಳಗಿನ ಉಪಹಾರಕ್ಕೆ ಒಂದು ಹೆಲ್ದಿ ಚಾಯ್ಸ್

ಏನೇನ್ ಬೇಕು?

ಅವಲಕ್ಕಿ

ರವೆ

ಮೊಸರು

ಉಪ್ಪು

ಜೀರಿಗೆ, ಹಸಿಮೆಣಸಿನಕಾಯಿ

ಎಣ್ಣೆ

ಮಾಡೋದು ಹೇಗೆ ನೋಡಿಕೊಳ್ಳಿ

ಮೊದಲು ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, 15 ರಿಂದ 20 ನಿಮಿಷಗಳ ಕಾಲ ನೆನೆಸಿಡಿ. ನೆನೆಸಿದ ಅವಲಕ್ಕಿಯೊಂದಿಗೆ ಮೊಸರು, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಮಿಕ್ಸರನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟಿಗೆ ರವೆ ಹಾಗೂ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಮತ್ತು ಜೀರಿಗೆಯನ್ನು ಸೇರಿಸಿ ಚೆನ್ನಾಗಿ ಕಲಸಿ ಅರ್ಧ ಗಂಟೆ ಇಡಿ. ಕಾವಲಿ ಬಿಸಿಯಾದ ಮೇಲೆ ಹಿಟ್ಟನ್ನು ದೋಸೆಯಂತೆ ಹರಡಿ, ಸುತ್ತಲೂ ಎಣ್ಣೆ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ. ಈಗ ಬಿಸಿಬಿಸಿಯಾದ ಮೃದುವಾದ ಅವಲಕ್ಕಿ ದೋಸೆ ಸವಿಯಲು ಸಿದ್ಧ!

ಇದನ್ನ ತಿಂದ್ರೆ ಏನ್ ಲಾಭ?

ಅವಲಕ್ಕಿಯಲ್ಲಿ ನಾರಿನಾಂಶ ಸಮೃದ್ಧವಾಗಿದ್ದು, ಹೊಟ್ಟೆ ಹಗುರವಾಗಿ ಇರಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ದೂರವಿಡುತ್ತದೆ.

ಇದರಲ್ಲಿ ಕ್ಯಾಲೊರಿಗಳು ಕಡಿಮೆ ಇರುವುದರಿಂದ ತೂಕ ನಿಯಂತ್ರಣದಲ್ಲಿಡಲು ಬಯಸುವವರಿಗೆ ಇದು ಅತ್ಯುತ್ತಮ ಉಪಹಾರ.

ಅವಲಕ್ಕಿ ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ. ಇದರಲ್ಲಿರುವ ಕಬ್ಬಿಣಾಂಶವು ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲವಾದ್ದರಿಂದ, ಮಧುಮೇಹಿಗಳು ಯಾವುದೇ ಆತಂಕವಿಲ್ಲದೆ ಇದನ್ನು ಸೇವಿಸಬಹುದು.

Must Read

Skip to toolbar