November 1, 2026
Sunday, November 1, 2026
spot_img

ಸಂಜೆ ಚಹಾ ಜೊತೆ ಟ್ರೈ ಮಾಡಿ ಚಿಕನ್ ಸಮೋಸ.. ರೆಸಿಪಿ ಸಿಂಪಲ್, ರುಚಿ ಸೂಪರ್

ಬೇಕಾಗುವ ಪದಾರ್ಥಗಳು:

ಮೈದಾ ಹಿಟ್ಟು

ಚಿಕನ್ ಕೀಮಾ

ಈರುಳ್ಳಿ

ಹಸಿಮೆಣಸಿನಕಾಯಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಅರಿಶಿಣ, ಖಾರದ ಪುಡಿ, ಗರಂ ಮಸಲಾ, ಉಪ್ಪು

ಕೊತ್ತಂಬರಿ ಸೊಪ್ಪು

ಎಣ್ಣೆ

ಮಾಡುವ ವಿಧಾನ

ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಈರುಳ್ಳಿ ಮತ್ತು ಹಸಿಮೆಣಸು ಹಾಕಿ ಬಾಡಿಸಿ. ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಇದಕ್ಕೆ ಚಿಕನ್ ಕೀಮಾ, ಅರಿಶಿಣ, ಖಾರದ ಪುಡಿ, ಗರಂ ಮಸಲಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನೀರು ಬಳಸದೆ ಕಡಿಮೆ ಉರಿಯಲ್ಲಿ ಚಿಕನ್ ಅನ್ನು ಚೆನ್ನಾಗಿ ಬೇಯಿಸಿ. ನಾದಿಕೊಂಡ ಮೈದಾ ಹಿಟ್ಟನ್ನು ಸಣ್ಣ ಉಂಡೆಗಳಾಗಿ ಲಟ್ಟಿಸಿ, ಸಮೋಸ ಪಟ್ಟಿಯಂತೆ ಅಥವಾ ಕೋನ್ ಆಕಾರದಲ್ಲಿ ಮಡಚಿ, ತಯಾರಿಸಿದ ಚಿಕನ್ ಹೂರಣವನ್ನು ಅದರೊಳಗೆ ತುಂಬಿ ಭದ್ರವಾಗಿ ಮುಚ್ಚಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಸಿದ್ಧಪಡಿಸಿದ ಸಮೋಸಾಗಳನ್ನು ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಗರಿಗರಿಯಾಗಿ ಕರಿದು ತೆಗೆಯಿರಿ. ಬಿಸಿ ಬಿಸಿ ಚಿಕನ್ ಸಮೋಸವನ್ನು ಟೊಮೆಟೊ ಸಾಸ್ ಅಥವಾ ಪುದೀನ ಚಟ್ನಿಯೊಂದಿಗೆ ಸವಿಯಲು ಕೊಡಿ.

Must Read

Skip to toolbar