ಬೇಕಾಗುವ ಸಾಮಗ್ರಿಗಳು:
ತುರಿದ ತೆಂಗಿನಕಾಯಿ
ಸಕ್ಕರೆ
ಹಾಲಿನ ಪೌಡರ್
ತುಪ್ಪ
ಏಲಕ್ಕಿ ಪುಡಿ
ಮಾಡುವ ವಿಧಾನ
ಬಾಣಲೆಯಲ್ಲಿ 1 ಚಮಚ ತುಪ್ಪ ಹಾಕಿ, ತುರಿದ ತೆಂಗಿನಕಾಯಿಯನ್ನು ಹಸಿ ವಾಸನೆ ಹೋಗುವವರೆಗೆ ಸಣ್ಣ ಉರಿಯಲ್ಲಿ 2 ನಿಮಿಷ ಹುರಿಯಿರಿ. ಇದಕ್ಕೆ ಸಕ್ಕರೆ ಮತ್ತು ಹಾಲಿನ ಪೌಡರ್ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಸಕ್ಕರೆ ಕರಗಿ ಮಿಶ್ರಣವು ಗಟ್ಟಿಯಾಗುತ್ತಾ ಬರುತ್ತದೆ. ನಂತರ ಅದಕ್ಕೆ ಏಲಕ್ಕಿ ಪುಡಿ ಮತ್ತು ಉಳಿದ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಸುರಿದು ಸಮವಾಗಿ ಒತ್ತಿ. 10 ನಿಮಿಷ ಆರಿದ ಬಳಿಕ ನಿಮ್ಮಿಷ್ಟದ ಆಕಾರದಲ್ಲಿ ಕತ್ತರಿಸಿ. ಈಗ ರುಚಿಕರ ಕೊಕೊನಟ್ ಬರ್ಫಿ ಸವಿಯಲು ಸಿದ್ದ.



