ಹೊಸದಿಗಂತ ವರದಿ ವಿಜಯಪುರ:
ಕೇವಲ ಸಿದ್ದರಾಮಯ್ಯನವರ ಮೇಲಲ್ಲ. ಬಹಳ ಜನರ ಮೇಲೆ ಸ್ಟಿಂಗ್ ಆಪರೇಷನ್ ಗಳು ಆಗಿವೆ, ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಎರಡು ಕಾರ್ಖಾನೆಗಳು ಇವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಸದ್ದು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒಂದು ಬಿಜೆಪಿ ಪೂಜ್ಯ ತಂದೆಯವರ ಕಿರಿಯ ಮಗನ ಮಾರ್ಗದರ್ಶನದಲ್ಲಿ, ಇನ್ನೊಂದು ರಾಜ್ಯದ ಮುಖ್ಯಮಂತ್ರಿ ಗಳ ಮಾರ್ಗದರ್ಶನದಲ್ಲಿ. ಎರಡು ಸ್ಟಿಂಗ್ ಆಪರೇಷನ್ ಸಿಡಿ ಕಂಪನಿಗಳು ಇವೆ ಎಂದರು.
ಇದನ್ನೂ ಓದಿ:
ಅವರಿಬ್ಬರಿಗೆ ತನಿಖೆ ಮಾಡಿ ಮಂಪರು ಪರೀಕ್ಷೆ ಮಾಡಿದರೆ ಎಲ್ಲ ಹೊರಗೆ ಬೀಳತ್ತೆ. ಸಿದ್ದರಾಮಯ್ಯ ನವರ ಸಿಡಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ತೋರಿಸಿಯೇ ಅವರನ್ನು ಕೆಳಗೆ ಇಳಿಸಿದ್ದಾರೆ. ಇದು ಸಿದ್ದರಾಮಯ್ಯ ನವರ ಆಪ್ತರೇ ನನಗೇ ಹೇಳಿದ್ದಾರೆ ಎಂದರು.
ಸಿದ್ದರಾಮಯ್ಯನವರ ರಾಜಕೀಯ ಮುಗಿಸಲು ಷಡ್ಯಂತ್ರ ಮಾಡಲಾಗಿದೆ. ಮೊದಲ ಟಾರ್ಗೆಟ್ ರಾಜಣ್ಣ, ಎರಡನೇಯದ್ದು ಸಿದ್ದರಾಮಯ್ಯ ಮೂರನೇಯದ್ದು ಈಗ ಸತೀಶ ಜಾರಕಿಹೋಳಿ. ಎಸ್ಐಆರ್ ವಿಚಾರವಾಗಿ ಜಾರಕಿಹೋಳಿ ಅವರ ಹೇಳಿಕೆಗೆ ಅಭಿನಂದಿಸುವೆ ಎಂದರು.



