November 2, 2026
Monday, November 2, 2026
spot_img

ಗೋಕರ್ಣ ಸಮುದ್ರ ದುರಂತಕ್ಕೆ ಮೂವರು ಬಲಿ; ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಹೊಸದಿಗಂತ ವರದಿ ಗೋಕರ್ಣ:

ಇಲ್ಲಿನ ದುಬ್ಬನಶಸಿ ಕಡಲ ತೀರದಲ್ಲಿ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರಿನ ಯುವಕ ವಿಶ್ವೇಶ್(24) ಮೃತದೇಹ ಸೋಮವಾರ ಬೆಳಗಿನ ಜಾವ ದುಬ್ಬನಶಸಿ ಕಡಲ ತೀರದಲ್ಲಿ ಪತ್ತೆಯಾಗಿದ್ದು ದುರ್ಘಟನೆಯಲ್ಲಿ ಮೂವರು ಮೃತಪಟ್ಟಿರುವುದು ಖಚಿತಗೊಂಡಂತಾಗಿದೆ.

ಬೆಂಗಳೂರಿನಿಂದ ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ ಪ್ರವಾಸಿಗರ ತಂಡ ರವಿವಾರ ಬೆಳಗಿನ ಜಾವ ಸಮುದ್ರದ ನೀರಿಗಿಳಿದ ಸಂದರ್ಭದಲ್ಲಿ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ಜಾರ್ಖಂಡ್ ಮೂಲದ ಶೋಭಾ ದಾಸ್(22) ಬೆಂಗಳೂರಿನ ಮಹಮ್ಮದ ಅಕ್ರಂ(27) ಮತ್ತು ವಿಶ್ವೇಶ್ ಆನಂದ ಕುಲಾಲ್(24) ಅವರು ನೀರಿನಲ್ಲಿ ಮುಳುಗಿದ್ದರು ಶೋಭಾ ದಾಸ್ ಮತ್ತು ಮಹಮ್ಮದ ಅಕ್ರಂ ಅವರ ಮೃತದೇಹ ಪತ್ತೆಯಾಗಿತ್ತಾದರೂ ಸಮುದ್ರದಲ್ಲಿ ಕಣ್ಮರೆಯಾಗಿದ್ದ ವಿಶ್ವೇಶ್ ಮೃತದೇಹಕ್ಕೆ ಶೋಧ ಕಾರ್ಯ ಸಾಗಿತ್ತು.

ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ದುಬ್ಬನಶಸಿ ಸಮುದ್ರ ತೀರದಲ್ಲಿ ವಿಶ್ವೇಶ್ ಮೃತದೇಹ ಪತ್ತೆಯಾಗಿದೆ. ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

Must Read