November 2, 2026
Monday, November 2, 2026
spot_img

ಹಾಸನಾಂಬೆ ದರುಶನಕ್ಕೆ ಜನಸಾಗರ : ಮೂರೇ ದಿನದಲ್ಲಿ ಐದು ಕೋಟಿ ರೂಪಾಯಿಗೂ ಅಧಿಕ ಆದಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಹಾಸನಾಂಬ ದೇವಿಯ ಸಾರ್ವಜನಿಕ ದರುಶನದ ನಾಲ್ಕನೇ ದಿನವಾಗಿದ್ದು, ಬೆಳಗ್ಗೆ ಆರು ಗಂಟೆಯಿಂದಲೇ ಜನಸಾಗರ ಹರಿದುಬಂದಿದೆ. ವೀಕೆಂಡ್‌, ವೀಕ್‌ಡೇಗಳ ಲೆಕ್ಕವಿಲ್ಲದಂತೆ ಜನರು ದೇವಿಯ ದರುಶನಕ್ಕೆ ಆಗಮಿಸುತ್ತಿದ್ದಾರೆ.

ಧರ್ಮದರುಶನ, ಸ್ಪೆಷಲ್‌ ದರುಶನ ಸಾಲಿನಲ್ಲಿಯೂ ಸಾವಿರಾರು ಭಕ್ತರು ಕಾಣಿಸಿದ್ದು, ದೇವಿಯ ದರುಶನಕ್ಕೆ ಹಾತೊರೆಯುತ್ತಿದ್ದಾರೆ. ನ್‌ಲೈನ್ ಟಿಕೆಟ್ ಬುಕ್ಕಿಂಗ್, ನೇರವಾಗಿ ವಿಶೇಷ ದರ್ಶನದ 1000 ರೂ., 300 ರೂ. ಟಿಕೆಟ್ ಮಾರಾಟ ಹಾಗೂ ಲಾಡು ಪ್ರಸಾದ ಮಾರಾಟದಿಂದ ಮೂರೇ ದಿನದಲ್ಲಿ ಐದು ಕೋಟಿ ರೂ.ಗೂ ಹೆಚ್ಚು ಆದಾಯ ಸಂಗ್ರಹವಾಗಿದೆ.

ಭಕ್ತರ ಸಂಖ್ಯೆ ಅಧಿಕವಾಗಿದ್ದರೂ ತಾಳ್ಮೆಗೆಡದೆ ಜನರು ಸರತಿ ಸಾಲಿನಲ್ಲಿ ನಿಂತು ದರುಶನ ಪಡೆಯುತ್ತಿದ್ದಾರೆ. ಇಂದು ಕೇಂದ್ರ ಸಚಿವ. ವಿ. ಸೋಮಣ್ಣ ಹಾಗೂ ಇನ್ನಿತರ ಗಣ್ಯರು ದರುಶನಕ್ಕೆ ಆಗಮಿಸಲಿದ್ದಾರೆ.

Must Read