ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾರುಖ್ ಖಾನ್ ಅಭಿನಯದ ಕಿಂಗ್ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಕಾಣಲಿದೆ. ಸಿನಿಮಾದ ಮೊದಲ ಹಾಡನ್ನು ಶಾರುಖ್ ಜನ್ಮದಿನದಂದು ರಿಲೀಸ್ ಮಾಡಲಾಗಿದೆ. ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡಿನ ವೈಬ್ ನೀಡುತ್ತಿದೆ ಎಂದು ನೆಟ್ಟಿಗರು ಹೇಳ್ತಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಸಿನಿಮಾ ಇದಾಗಿದ್ದು, ಶಾರುಖ್ ಜನ್ಮದಿನಕ್ಕೆ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಲಾಗಿದೆ. ಮಧ್ಯರಾತ್ರಿ ತು ಮಿಲ್ ಜಾಯೆ ಹಾಡನ್ನು ರಿಲೀಸ್ ಮಾಡಿದ್ದು, ಯುಟ್ಯೂಬ್‌ನಲ್ಲಿ ಲಕ್ಷಾಂತರ ವ್ಯೂಸ್ ಸಿಕ್ಕಿದೆ.
ಸಚಿನ್ ಜಿಗರ್ ಸಂಗೀತ ನಿರ್ದೇಶನದಲ್ಲಿ ಹಾಡು ಮೂಡಿಬಂದಿದ್ದು, ಅರಿಜಿತ್ ಸಿಂಗ್, ಮಧುಬಂತಿ ಬಾಗ್ಚಿ ಹಾಗೂ ಫೇಮಸ್ ಸಿಂಗರ್ ಎಡ್ ಶೀರನ್ ಕೂಡ ಹಾಡು ಹೇಳಿದ್ದಾರೆ. ಶಾರುಖ್ ಹಾಗೂ ದೀಪಿಕಾ ಕೆಮಿಸ್ಟ್ರಿಯನ್ನು ಜನ ಹಿಂದಿನಿಂದಲೂ ಮೆಚ್ಚಿದ್ದಾರೆ. ತಾಯಿಯಾದ ನಂತರ ನಟಿ ದೀಪಿಕಾರನ್ನು ಮೊದಲ ಬಾರಿಗೆ ಸ್ಕ್ರೀನ್ ಮೇಲೆ ನೋಡಿದ್ದು, ಅಭಿಮಾನಿಗಳು ದೀಪಿಕಾ ಅದ್ಭುತವಾಗಿ ಕಾಣಿಸುತ್ತಿದ್ದಾರೆ ಎಂದಿದ್ದಾರೆ.
ತುಂಬಾ ಸಮಯದ ನಂತರ ಒಂದೊಳ್ಳೆ ಹಾಡು ರಿಲೀಸ್ ಆಗಿದೆ ಎಂದು ಅಭಿಮಾನಿಗಳು ಮನತುಂಬಿ ಹೊಗಳಿದ್ದಾರೆ. ಸಾಮಾಜಿಕ ಜಾಲತಾಣದ ಸೆನ್ಸೇಷನ್ ಆಗಿರುವ ಈ ಹಾಡು ಹೇಗಿದೆ? ನೀವೇ ನೋಡಿ..



