November 2, 2026
Monday, November 2, 2026
spot_img

ಗ್ರಾಹಕರಿಗೆ ಮತ್ತೊಂದು ಶಾಕ್‌! ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ಕಾಫಿ, ಟೀ ಬೆಲೆ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ ಎಂಟರಿಂದ 12ರೂಪಾಯಿಯಷ್ಟು ಹೆಚ್ಚಳ ಕಂಡಿದೆ. ಈ ಬೆನ್ನಲ್ಲೇ ಹೊಟೇಲ್‌ಗಳು ಕಾಫಿ, ಟೀ ದರವನ್ನು ಹೆಚ್ಚಿಸಿವೆ.

ಹೌದು, ನವೆಂಬರ್ 1ರಿಂದ ಹಾಲಿನ ಹೊಸ ದರ ಜಾರಿಗೆ ಬಂದಿದ್ದು, ಇದರ ನೇರ ಪರಿಣಾಮವಾಗಿ ಇಂದಿನಿಂದಲೇ ರಾಜ್ಯಾದ್ಯಂತ ಹೋಟೆಲ್‌ಗಳು ಮತ್ತು ಕೆಫೆಗಳಲ್ಲಿ ಕಾಫಿ ಹಾಗೂ ಟೀ ಬೆಲೆಯಲ್ಲಿ ₹5 ರವರೆಗೆ ಹೆಚ್ಚಳ ಮಾಡಲಾಗಿದೆ. ಹೋಟೆಲ್ ಮಾಲೀಕರ ಸಂಘದ ಎಚ್ಚರಿಕೆಯ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹಾಲಿನ ದರ ತೀವ್ರವಾಗಿ ಏರಿಕೆ ಆಗಿರುವುದರಿಂದ ಮೆನು ದರಗಳನ್ನು ಪರಿಷ್ಕರಿಸುವುದು ಅನಿವಾರ್ಯವಾಗಿದೆ.ಕಾಫಿ, ಟೀ ಜೊತೆಗೆ ಹಾಲನ್ನು ಬಳಸಿ ಮಾಡುವ ಎಲ್ಲ ಸಿಹಿತಿನಿಸುಗಳ ರೇಟ್‌ ಕೂಡ ಹೆಚ್ಚಳವಾಗಲಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಕೊನೆಯ ಬಾರಿಗೆ ಏಪ್ರಿಲ್ 1, 2025 ರಂದು ಸರ್ಕಾರವು ಹಾಲಿನ ಬೆಲೆಯನ್ನು ಲೀಟರ್‌ಗೆ ₹4 ಹೆಚ್ಚಿಸಿತ್ತು. ಅದಕ್ಕೂ ಮುನ್ನ, ಜೂನ್ 2024 ರಲ್ಲಿ 500 ಮಿಲಿ ಪ್ಯಾಕೆಟ್‌ಗೆ ಹೆಚ್ಚುವರಿಯಾಗಿ 50 ಮಿಲಿ ಹಾಲು ನೀಡುವುದಕ್ಕೆ ಅನುಗುಣವಾಗಿ ಲೀಟರ್‌ಗೆ ₹2 ಹೆಚ್ಚಿಸಲಾಗಿತ್ತು.

Must Read