November 3, 2026
Tuesday, November 3, 2026
spot_img

ನ.10ರಿಂದ ಕಾರ್ತಿಕ ಮಾಸ ಆರಂಭ, ಈ ಸಮಯದಲ್ಲಿ ಪುಣ್ಯಪ್ರಾಪ್ತಿಗೆ ಈ ಕಾರ್ಯಗಳನ್ನು ಮಾಡಿ

ನವೆಂಬರ್ ಹತ್ತರಿಂದ ಕಾರ್ತಿಕ ಮಾಸ ಆರಂಭವಾಗುತ್ತಿದೆ. ಈ ಪುಣ್ಯ ಸಮಯದಲ್ಲಿ ಮಾಡುವ ಹಲವು ಕಾರ್ಯಗಳು ಪುಣ್ಯಪ್ರಾಪ್ತಿಯಾಗಲು ಸಹಕರಿಸುತ್ತವೆ.ಹಿಂದು ಧರ್ಮದಲ್ಲಿ ಕಾರ್ತಿಕ ಮಾಸ ಅತ್ಯಂತ ಪವಿತ್ರವಾದುದು ಹಾಗೂ ಶ್ರೇಷ್ಠವೆಂದು ಹೇಳಲಾಗುತ್ತದೆ. ಶಿವ ಹಾಗೂ ವಿಷ್ಣು ಇಬ್ಬರಿಗೂ ಈ ಮಾಸ ಅತ್ಯಂತ ಪ್ರಿಯವೆಂದು ಪರಿಗಣಿಸಲಾಗಿದೆ.

ಈ ಸಮಯದಲ್ಲಿ ಯಾವೆಲ್ಲಾ ಆಚರಣೆ ಮಾಡಬೇಕು?

ಕಾರ್ತಿಕ ಮಾಸದಲ್ಲಿ ನಿತ್ಯವೂ ಮನೆಯ ಮುಂಬಾಗಿಲಿನ ಬಳಿ ಹಾಗೂ ತುಳಸಿ ಕಟ್ಟೆಯ ಬಳಿ ದೀಪ ಬೆಳಗಬೇಕು. ಇನ್ನು ದೇವಸ್ಥಾನಗಳ ಬಳಿ ದೀಪ ಬೆಳಗುವುದನ್ನು ಪುಣ್ಯದ ಕೆಲಸ ಎಂದು ಹೇಳಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಸೂರ್ಯೋದಯಕ್ಕೂ ಮುನ್ನ ನದಿ, ಸಮುದ್ರ ಅಥವಾ ಪವಿತ್ರ ಜಲದಲ್ಲಿ ಸ್ನಾನ ಮಾಡುವುದು ಉತ್ತಮವಾಗಿದೆ. ಇದರ ಜೊತೆಗೆ ಕಾರ್ತಿಕ ಶುಕ್ಲ ದ್ವಾದಶಿಯಂದು ತುಳಸಿ ಪೂಜೆ ಮಾಡಬೇಕಿದೆ.

ಅಣ್ಣ ತಂಗಿಯರ ಭೋಜನ ಸಂಪ್ರದಾಯ

ಕಾರ್ತಿಕ ಮಾಸದ ಬಿದಿಗೆಯಂದು ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ಮನೆಗಳಿಗೆ ತೆರಳಿ ಪ್ರೀತಿಯಿಂದ ಭೋಜನ ಸ್ವೀಕರಿಸಿ ಬರುವ ಸಂಪ್ರದಾಯವನ್ನು ಹಲವು ಮನೆಗಳಲ್ಲಿ ಇಂದಿಗೂ ಪಾಲಿಸಲಾಗುತ್ತಿದೆ. ಪ್ರತೀ ಸೋಮವಾರದಂದು ಶಿವ ದೇವರಿಗೆ ಕ್ಷೀರಾಭಿಷೇಕ ಹಾಗೂ ಉಪವಾಸವನ್ನು ಆಚರಣೆ ಮಾಡಲಾಗುತ್ತದೆ. ಇನ್ನು ಕಾರ್ತಿಕ ಹುಣ್ಣಿಮೆಯ ದಿನ ಶಿವನು ತ್ರಿಪುರಾಸುರನನ್ನು ಸಂಹಾರ ಮಾಡಿದ ದಿನವೆಂದು ನಂಬಲಾಗಿದೆ. ಹಲವರು ಹುಣ್ಣಿಮೆಯ ದಿನದಂದ ನೆಲ್ಲಿಕಾಯಿ ಗಿಡದ ಬುಡದಲ್ಲಿ ಪೂಜೆ ಹಾಗೂ ಧಾತ್ರಿ ಹೋಮ ಮಾಡುತ್ತಾರೆ.

Must Read