November 3, 2026
Tuesday, November 3, 2026
spot_img

ಐದನೇ ದಿನವೂ ಹಾಸನಾಂಬೆ ದರುಶನಕ್ಕೆ ಜನಸಾಗರ: ತಾಳ್ಮೆಯಿಂದ ಸರತಿ ಸಾಲಿನಲ್ಲಿ ಕಾದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶ್ವವಿಖ್ಯಾತ, ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ದರುಶನಕ್ಕೆ ಇಂದು ಐದನೇ ದಿನವಾಗಿದ್ದು, ಬೆಳಗ್ಗೆ ಆರು ಗಂಟೆಯಿಂದಲೇ ಭಕ್ತಾದಿಗಳು ಕಾದು ಕುಳಿತಿದ್ದಾರೆ.
 
ದೇವಿಯ ದರುಶನಕ್ಕೆ ಭಕ್ತರ ಮಹಾಪೂರವೇ ಹರಿದುಬರುತ್ತಿದೆ. ಸಾರ್ವಜನಿಕ ದರ್ಶನದ ಐದನೇ ದಿನವಾದ ಮಂಗಳವಾರವೂ ದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದಾರೆ. ಮುಂಜಾನೆಯಿಂದಲೇ ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ.

ಧರ್ಮದರ್ಶನದ ಸರದಿಯಲ್ಲಿ ಭಕ್ತರು ಕಿಲೋಮೀಟರ್‌ಗಟ್ಟಲೆ ನಿಂತು ದೇವಿಯ ದರುಶನಕ್ಕಾಗಿ ಕಾಯುತ್ತಿದ್ದಾರೆ. ಬೆಳಗ್ಗಿನಿಂದಲೇ ಸರದಿ ಸಾಲುಗಳು ತುಂಬಿ ತುಳುಕುತ್ತಿದ್ದು, ಭಕ್ತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದೇವಿಯ ದರುಶನ ಪಡೆದಿದ್ದಾರೆ. ಕೇವಲ ಮೂರು ದಿನದಲ್ಲಿ ಹಾಸನಾಂಬೆ ಸನ್ನಿಧಿಯಲ್ಲಿ ಐದು ಕೋಟಿಗೂ ಅಧಿಕ ಮೌಲ್ಯದ ವಹಿವಾಟುಗಳು ನಡೆದಿವೆ.

Must Read