November 3, 2026
Tuesday, November 3, 2026
spot_img

ಸಾಯಂಕಾಲದ ಹಸಿವಿಗೆ ಟೇಸ್ಟಿ ರೋಸ್ಟೆಡ್‌ ಮಖಾನಾ ಬೆಸ್ಟ್‌ ಚಾಯ್ಸ್‌, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು

ಕಪ್ ಮಖಾನಾ
ಚಮಚ ತುಪ್ಪ
ಖಾರದ ಪುಡಿ
ಅರಿಶಿನ
ಚಾಟ್ ಮಸಾಲಾ
ಜೀರಿಗೆ ಪುಡಿ
ಕಾಳುಮೆಣಸಿನ ಪುಡಿ
ಉಪ್ಪು
ಕರಿಬೇವು

ಮಾಡುವ ವಿಧಾನ

ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ.

ಅದಕ್ಕೆ ಮಖಾನಾ ಸೇರಿಸಿ ಕಡಿಮೆ ಉರಿಯಲ್ಲಿ 5–7 ನಿಮಿಷ ಹುರಿಯಿರಿ. ಅದು ಗರಿಗರಿಯಾಗುವವರೆಗೂ ಸಣ್ಣ ಉರಿಯಲ್ಲಿ ರೋಸ್ಟ್‌ ಮಾಡಿ.

ಈಗ ಖಾರದ ಪುಡಿ, ಅರಿಶಿನ, ಜೀರಿಗೆ ಪುಡಿ, ಕಾಳುಮೆಣಸು ಮತ್ತು ಉಪ್ಪು ಸೇರಿಸಿ.

ಕೊನೆಯಲ್ಲಿ ಚಾಟ್ ಮಸಾಲಾ ಹಾಗೂ ಹುರಿದ ಕರಿಬೇವು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ತಣ್ಣಗಾದ ನಂತರ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ. ಮಕ್ಕಳಿಗೆ ಅಥವಾ ದೊಡ್ಡವರು ಕೂಡ ಯಾವುದೇ ಗಿಲ್ಟ್‌ ಇಲ್ಲದೇ ಈ ಸ್ನಾಕ್ಸ್‌ ತಿನ್ನಬಹುದು

Must Read