November 3, 2026
Tuesday, November 3, 2026
spot_img

ಫಿಟ್ & ಫುಡ್ 03 | ಮನೆಯಲ್ಲಿ ಅಕ್ಕಿ ಹಿಟ್ಟಿದೆಯಾ? ಹಾಗಾದ್ರೆ ಇಂದೇ ಟ್ರೈ ಮಾಡಿ ಈ ಇನ್‌ಸ್ಟಂಟ್ ಬ್ರೇಕ್‌ಫಾಸ್ಟ್

ರಾತ್ರಿ ಹಿಟ್ಟು ನೆನೆಸಲು ಮರೆತರೆ ಇನ್ಮುಂದೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಮನೆಯಲ್ಲಿ ಅಕ್ಕಿ ಹಿಟ್ಟು ಮತ್ತು ಸ್ವಲ್ಪ ಮೊಸರಿದ್ದರೆ ಸಾಕು, ಹತ್ತೇ ನಿಮಿಷದಲ್ಲಿ ಬಿಸಿಬಿಸಿಯಾದ ಉಪ್ಪಿಟ್ಟು ರೆಡಿ ಮಾಡಬಹುದು. ಬ್ಯಾಚುಲರ್ಸ್ ಕೂಡ ಸುಲಭವಾಗಿ ಮಾಡಬಹುದಾದ ಸಿಂಪಲ್ ರೆಸಿಪಿ ಇದು.

ಬೇಕಾಗುವ ಸಾಮಗ್ರಿಗಳು

ಅಕ್ಕಿ ಹಿಟ್ಟು

ಮೊಸರು, ನೀರು

ಈರುಳ್ಳಿ, ಹಸಿಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು

ಸಾಸಿವೆ, ಜೀರಿಗೆ

ಕಡಲೆಬೇಳೆ, ಉದ್ದಿನಬೇಳೆ,

ಕರಿಬೇವು, ಉಪ್ಪು

ಎಣ್ಣೆ ಅಥವಾ ತುಪ್ಪ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಮೊಸರು, ಉಪ್ಪು ಮತ್ತು ನೀರು ಹಾಕಿ ಗಂಟಿಲ್ಲದಂತೆ ತೆಳುವಾಗಿ ಕಲಸಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿದು, ನಂತರ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಬಾಡಿಸಬೇಕು.

ಬಳಿಕ ಕಲಸಿಟ್ಟುಕೊಂಡ ಅಕ್ಕಿ ಹಿಟ್ಟಿನ ಮಿಶ್ರಣವನ್ನು ಬಾಣಲೆಗೆ ಸುರಿದು ಕೈಯಾಡಿಸಬೇಕು. ಹಿಟ್ಟು ಬೇಗನೇ ಗಟ್ಟಿಯಾಗಲು ಶುರುವಾಗುತ್ತದೆ. ಸಣ್ಣ ಉರಿಯಲ್ಲೇ 4-5 ನಿಮಿಷ ಕೈಯಾಡಿಸುತ್ತಿದ್ದರೆ ಹಿಟ್ಟು ಬೆಂದು, ಉದುರು ಉದುರಾದ ಉಪ್ಪಿಟ್ಟಿನ ಹದಕ್ಕೆ ಬರುತ್ತದೆ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿದರೆ ಬಿಸಿಬಿಸಿ ಅಕ್ಕಿ ಹಿಟ್ಟಿನ ಉಪ್ಪಿಟ್ಟು ಸವಿಯಲು ಸಿದ್ಧ.

Must Read

Skip to toolbar