ಹೊಸದಿಗಂತ ವರದಿ ರಾಮನಗರ:
ಎರಡು ಬಾರಿ ಸಿಎಂ, ಪ್ರಸ್ತುತ ಕೇಂದ್ರ ಸಚಿವರಾಗಿರುವ ದೊಡ್ಡ ಮನುಷ್ಯರು ಇಂತಹ ಅಸಹ್ಯ ಕೆಲಸಕ್ಕೆ ಕೈಹಾಕುವುದಿಲ್ಲ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆಯಾಗಲಿ. ಕುಮಾರಸ್ವಾಮಿ ತನಿಖೆಗೆ ಸಹಕಾರ ಕೊಟ್ಟರೆ ಯಾರು ಈ ಕೆಲಸ ಮಾಡಿದ್ದಾರೆ ಎಂಬುದು ಹೊರಬಂದು, ಅವರ ಮೇಲಿರುವ ಕಳಂಕವೂ ಹೋಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಬಾಲಕೃಷ್ಣ ತಿಳಿಸಿದರು.
ಸ್ಟಿಂಗ್ ಪ್ರಕರಣದಲ್ಲಿ ಕೇಂದ್ರ ಸಚಿವ ಚ್.ಡಿ. ಕುಮಾರಸ್ವಾಮಿ ಹೆಸರು ಪ್ರಸ್ತಾಪ ಕುರಿತು ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಪ ಕುಮಾರಣ್ಣಂಗೆ ಈ ವಿಚಾರ ಗೊತ್ತೋ ಇಲ್ವೋ? ಒಟ್ಟಿನಲ್ಲಿ ಅವರ ಮನೆಯಲ್ಲಿ ಘಟನೆ ನಡೆದಿದೆ. ಬಹುಶಃ ಕುಮಾರಣ್ಣನ ಗಮನಕ್ಕೆ ಹೋಗಿಲ್ಲ ಅನಿಸುತ್ತದೆ. ಅವರ ಮನೆಯಲ್ಲಿರುವ ಯಾರೋ ಈ ಕೆಲಸ ಮಾಡಿದ್ದಾರೆ ಎಂದರು.
ಇದನ್ನೂ ಓದಿ:
ಕುಮಾರಸ್ವಾಮಿ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ಆದರೆ ಅವರ ಧಮ್ಕಿಗೆ ಯಾರೂ ಹೆದರುವುದಿಲ್ಲ. ಹಿಂದೆ ಹಾಸನ ಜಿಲ್ಲಾಧಿಕಾರಿಗೂ ಧಮ್ಕಿ ಹಾಕಿದ್ದರು, ಆ ಮೇಡಂ ಸರಿಯಾಗಿಯೇ ಉತ್ತರ ಕೊಟ್ಟರು. ಈಗ ಪೊಲೀಸ್ ಕಮಿಷನರ್ ಸತ್ಯದ ವಿಚಾರ ಹೇಳಿದ್ದಾರೆ. ಅವರ ಹೇಳಿಕೆ ತಪ್ಪಿದ್ದರೆ ಕೋರ್ಟ್ನಲ್ಲಿ ಚಾಲೆಂಜ್ ಮಾಡಲಿ, ಸುಮ್ಮನೆ ಬೆದರಿಕೆ ಹಾಕಿದರೆ ಪ್ರಯೋಜನವಿಲ್ಲ. ಕಮಿಷನರ್ರನ್ನು ಗಲ್ಲಿಗೇರಿಸಿ ಬಿಡುತ್ತಾರಾ ಎಂದರು.



