November 5, 2026
Thursday, November 5, 2026
spot_img

ದೆಹಲಿಯಲ್ಲಿ ಮತ್ತೊಂದು ದುರಂತ: ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡ ಕುಸಿತ, ಇಬ್ಬರು ಕಾರ್ಮಿಕರು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಧಾನಿ ದೆಹಲಿಯ ಚಾಂದ್ನಿ ಚೌಕ್ ಪ್ರದೇಶದಲ್ಲಿಇಂದು (ಗುರುವಾರ) ಬೆಳ್ಳಂಬೆಳಗ್ಗೆ ಭೀಕರ ದುರಂತವೊಂದು ಸಂಭವಿಸಿದೆ. ಚೌರಿ ಬಜಾರ್ ಮೆಟ್ರೋ ನಿಲ್ದಾಣದ ಸಮೀಪವಿರುವ ಪೈವಾಲನ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡವೊಂದು ದಿಢೀರ್ ಕುಸಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಅವಶೇಷಗಳ ಅಡಿಯಲ್ಲಿ ಮತ್ತಷ್ಟು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ವೇಗವಾಗಿ ನಡೆದ ರಕ್ಷಣಾ ಕಾರ್ಯಾಚರಣೆ

ದೆಹಲಿ ಅಗ್ನಿಶಾಮಕ ಸೇವೆಗೆ (DFS) ಬೆಳಿಗ್ಗೆ ಸುಮಾರು 9:50 ಕ್ಕೆ ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಅಗ್ನಿಶಾಮಕ ದಳದ ಆರು ಘಟಕಗಳು, ಕ್ವಿಕ್ ರಿಯಾಕ್ಷನ್ ವೆಹಿಕಲ್ (QRV) ಮತ್ತು ಇನ್ಸಿಡೆಂಟ್ ರಿಸ್ಪಾನ್ಸ್ ಟೀಮ್ (IRT) ರಕ್ಷಣಾ ಸಾಮಗ್ರಿಗಳೊಂದಿಗೆ ಸ್ಥಳಕ್ಕೆ ಧಾವಿಸಿವೆ. ಸ್ಟೇಷನ್ ಆಫೀಸರ್ ಡಿ.ಕೆ. ರಾಯ್ ಮತ್ತು ಅಸಿಸ್ಟೆಂಟ್ ಡಿವಿಜನಲ್ ಆಫೀಸರ್ (ADO) ರಾಜೇಶ್ ಶುಕ್ಲಾ ನೇತೃತ್ವದಲ್ಲಿ ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯಾಚರಣೆ ಚುರುಕಿನಿಂದ ಸಾಗಿದೆ.

ಭೀಕರ ಶಬ್ದಕ್ಕೆ ಬೆಚ್ಚಿಬಿದ್ದ ಸ್ಥಳೀಯರು

ಪ್ರತ್ಯಕ್ಷದರ್ಶಿ ಮೊಹಮ್ಮದ್ ನಯೀಮ್ ಅವರ ಪ್ರಕಾರ, ಘಟನೆ ಬೆಳಿಗ್ಗೆ 9 ರಿಂದ 9:30 ರ ಸುಮಾರಿಗೆ ನಡೆದಿದೆ. “ನಾವು ಜೋರಾದ ಶಬ್ದ ಕೇಳಿ ನಮ್ಮ ಮನೆಯೇ ಕುಸಿಯುತ್ತಿದೆ ಎಂದು ಹೆದರಿ ಹೊರಗೆ ಓಡಿ ಬಂದೆವು. ಆದರೆ ಪಕ್ಕದಲ್ಲೇ ಕಳೆದ 3-4 ತಿಂಗಳುಗಳಿಂದ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೂರು-ನಾಲ್ಕು ಲಿಂಟೆಲ್‌ಗಳು ಒಟ್ಟಿಗೆ ಕುಸಿದು ಬಿದ್ದಿರುವುದು ಗೋಚರಿಸಿತು. ಗಾಯಗೊಂಡ ಕಾರ್ಮಿಕನೊಬ್ಬ ನೀಡಿದ ಮಾಹಿತಿ ಪ್ರಕಾರ, ಅವಶೇಷಗಳಡಿ ಇನ್ನೂ ಮೂರ್ನಾಲ್ಕು ಮಂದಿ ಸಿಲುಕಿರುವ ಸಾಧ್ಯತೆ ಇದೆ” ಎಂದು ಅವರು ತಿಳಿಸಿದ್ದಾರೆ.

ಸುರಕ್ಷತಾ ಆಡಿಟ್ ಬಗ್ಗೆ ಪ್ರಶ್ನಿಸಿದ ಸೌರಭ್ ಭಾರದ್ವಾಜ್

ಈ ದುರಂತದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ (AAP) ಮತ್ತು ರೇಖಾ ಗುಪ್ತಾ ನೇತೃತ್ವದ ದೆಹಲಿ ಸರ್ಕಾರದ ನಡುವೆ ರಾಜಕೀಯ ವಾಗ್ದಾಳಿ ಆರಂಭವಾಗಿದೆ. ಎಎಪಿ ನಾಯಕ ಸೌರಭ್ ಭಾರದ್ವಾಜ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ದೆಹಲಿ ಸರ್ಕಾರ ಮತ್ತು ದೆಹಲಿ ಮಹಾನಗರ ಪಾಲಿಕೆ (MCD) ಹಲವು ಬಾರಿ ಸುರಕ್ಷತಾ ತಪಾಸಣೆ ನಡೆಸಿದ್ದರೂ, ಇಂತಹ ಕಟ್ಟಡ ಕುಸಿತಗಳು ಏಕೆ ನಿರಂತರವಾಗಿ ಮರುಕಳಿಸುತ್ತಿವೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:

ಇಲಾಖೆಗಳ ಭ್ರಷ್ಟಾಚಾರದ ವಿರುದ್ಧ ಆಪಾದನೆ

ಕಟ್ಟಡಗಳ ಸುರಕ್ಷತಾ ನಿಯಮಗಳ ಜಾರಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ಸೌರಭ್ ಭಾರದ್ವಾಜ್, ದೆಹಲಿ ಪೊಲೀಸ್, ಎಂಸಿಡಿ, ಅಗ್ನಿಶಾಮಕ ಮತ್ತು ಕಂದಾಯ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿದ್ದಾರೆ. ಲಂಚ ನೀಡದ ಮಾಲೀಕರ ಕಟ್ಟಡಗಳನ್ನು ಮಾತ್ರ ಸೀಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ದಕ್ಷಿಣ ದೆಹಲಿ ವಲಯದ ಗ್ರೇಟರ್ ಕೈಲಾಶ್ 2 ರಲ್ಲಿನ ಜಿಮ್‌ಗಳನ್ನು ಮಾತ್ರ ಗುರಿಯಾಗಿಸಿಕೊಂಡು ಸೀಲ್ ಮಾಡಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ.

Must Read

Skip to toolbar