November 5, 2026
Thursday, November 5, 2026
spot_img

ದೀಪಾವಳಿಗೂ ಮುನ್ನ ಅನ್ನದಾತನಿಗೆ ಖುಷಿ ಸುದ್ದಿ : ಬರ ಪರಿಹಾರ ಮೊತ್ತ ಐದು ಸಾವಿರಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೀಪಾವಳಿಗೂ ಮುನ್ನವೇ ರೈತರಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್‌ ನೀಡಿದೆ. ಬರದಿಂದ ಕಂಗಾಲಾಗಿರುವ 57 ಲಕ್ಷ ರೈತರ ಮುಖದಲ್ಲಿ ಸಂತಸ ಮೂಡಿದೆ. ಈ ಹಿಂದೆ ಘೋಷಣೆ ಮಾಡಲಾಗಿದ್ದ ₹2,500 ರ ಮೊದಲ ಕಂತಿನ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಇದರೊಂದಿಗೆ ಒಟ್ಟು ಕನಿಷ್ಠ ಪರಿಹಾರದ ಮೊತ್ತವನ್ನು ₹5,000 ಕ್ಕೆ ಹೆಚ್ಚಿಸಲಾಗಿದೆ.

ಮೊದಲು ಸರ್ಕಾರ ತನ್ನ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಪ್ರತಿ ಅರ್ಹ ರೈತರಿಗೆ ಎರಡೂವರೆ ಸಾವಿರ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಈ ಹಣದಿಂದ ರೈತರಿಗೆ ಯಾವುದೇ ಪರಿಹಾರ ದೊರೆಯುವುದಿಲ್ಲ ಎನ್ನುವುದನ್ನು ಮನಗಂಡು ರಾಜ್ಯ ಸರ್ಕಾರವು ತನ್ನ ಸ್ವಂತ ನಿಧಿಯಿಂದಲೇ ಹೆಚ್ಚುವರಿ ಮೊತ್ತವನ್ನು ಭರಿಸಿ ಕನಿಷ್ಠ ಒಟ್ಟು ಪರಿಹಾರದ ಮಿತಿಯನ್ನು ಬರೋಬ್ಬರಿ ₹5,000 ಕ್ಕೆ ದುಪ್ಪಟ್ಟುಗೊಳಿಸಿದೆ.

ಯಾದಗಿರಿ ಜಿಲ್ಲೆಯ ರೈತರ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಹಣ ಜಮೆ ಮಾಡಿ ಸಿಎಂ ಡಿ.ಕೆ. ಶಿವಕುಮಾರ್‌ ಅವರು ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.ನಮ್ಮ ಇಷ್ಟು ವರ್ಷದ ಅನುಭವದಲ್ಲಿ, ಇಷ್ಟು ಬರಗಾಲ ಯಾವತ್ತೂ ಕಂಡಿರಲಿಲ್ಲ. ರಾಜ್ಯದಲ್ಲಿ 57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಒಟ್ಟು 226 ತಾಲೂಕುಗಳನ್ನು ಬರಪೀಡಿತ ಎಂದು ಕೇಂದ್ರದ ಮಾರ್ಗಸೂಚಿ ಪ್ರಕಾರ ಘೋಷಿಸಲಾಗಿದ್ದು, ಬರಗಾಲದಿಂದ ರಾಜ್ಯದಲ್ಲಿ ಅಂದಾಜು ₹62,000 ಕೋಟಿ ನಷ್ಟ ಸಂಭವಿಸಿದ್ದು, ₹22,400 ಕೋಟಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ದೀಪಾವಳಿ ಹಬ್ಬದ ನಂತರ ಮತ್ತೊಂದು ಕಂತಿನಲ್ಲಿ ಬಾಕಿ ₹2,500 ಹಣವನ್ನ ಸರ್ಕಾರ ನೀಡಲಿದೆ.

Must Read