November 6, 2026
Friday, November 6, 2026
spot_img

ದಿನಭವಿಷ್ಯ: ದೀರ್ಘಕಾಲದಿಂದ ಕಾಡುತ್ತಿದ್ದ ಸಮಸ್ಯೆ ಪರಿಹಾರವಾಗುವ ದಿನ, ಆರೋಗ್ಯದ ಬಗ್ಗೆ ಎಚ್ಚರ

ಮೇಷ.
ವೃತ್ತಿಯಲ್ಲಿ ಅಸಹಾಯಕ ಸನ್ನಿವೇಶ ಎದುರಾದೀತು. ಮನೆಯಲ್ಲಿ ಕೂಡಾ ನೆಮ್ಮದಿಗೆ ಭಂಗ. ಸಹನೆ, ಹೊಂದಾಣಿಕೆ ಮುಖ್ಯ.
ವೃಷಭ
ಉತ್ಸಾಹದ ದಿನ. ನಿಮ್ಮ ಸೂರ್ತಿಯುತ ಕಾರ್ಯ ಯಶಸ್ಸು ತರುವುದು. ಮನೆಯಲ್ಲಿ ಭಿನ್ನಮತ ನಿವಾರಣೆ. ಆದರಾತಿಥ್ಯ ಲಭ್ಯ.
ಮಿಥುನ
ದೀರ್ಘಕಾಲೀನ ಬಿಕ್ಕಟ್ಟು ಇಂದು ಪರಿಹಾರ ಸಾಧ್ಯತೆ. ಆರ್ಥಿಕ ಸಮಸ್ಯೆಗಳನ್ನು ತಕ್ಷಣವೆ ಪರಿಹರಿಸಿ. ಚಿಂತೆ ವಿಮುಕ್ತಿ.   ಸಂತಸದ ಮನಸ್ಥಿತಿ.
ಕಟಕ
ಇತರರ ಸಲಹೆಗಳಿಗೆ ಕಿವಿಗೊಡಿ. ಎಲ್ಲರನ್ನು ತಕ್ಷಣಕ್ಕೆ ತಿರಸ್ಕರಿಸಬೇಡಿ. ಮುಂದೆ ಒಳಿತು ಸಂಭವಿಸಲಿದೆ. ಕೌಟುಂಬಿಕ ಸಹಕಾರ ಲಭಿಸುವುದು.
ಸಿಂಹ
ಎಲ್ಲರೊಂದಿಗೆ ಬೆರೆಯಿರಿ. ಸಮಸ್ಯೆಗೆ ಹೆದರಿ ಕೊರಗುತ್ತಾ ಕೂರದಿರಿ. ಮನಸ್ಸಿನ ತಾಕಲಾಟಕ್ಕೆ ಇತರರಿಂದ ಪರಿಹಾರ ಸಿಗಬಹುದು.
ಕನ್ಯಾ
ಶಾಂತಚಿತ್ತರಾದ ನೀವು ಇಂದು ಸಹನೆ ಕಳಕೊಳ್ಳುವ ಪ್ರಸಂಗ ಒದಗೀತು. ಇತರರ ವರ್ತನೆ ಅಸಹನೆ ತರಲಿದೆ. ಖರ್ಚು ಹೆಚ್ಚುವ ಸಾಧ್ಯತೆ.
ತುಲಾ
ಚಿಂತೆ, ಆತಂಕಗಳು ಇಂದು ಕಾಡುವವು. ಸಮಸ್ಯೆಯ ಆಳಕ್ಕಿಳಿದು ಪರಿಹಾರ ಕಂಡುಕೊಳ್ಳಿ. ಬೇರೆಲ್ಲೋ ಪರಿಹಾರ ಸಿಗಬಹುದು.  
ವೃಶ್ಚಿಕ
ಮಾತಿನಿಂದಲೆ ಎಲ್ಲರನ್ನು ಗೆಲ್ಲುವಿರಿ. ನಿಮ್ಮ ಕೆಲಸದ ವೇಗವೂ ಹೆಚ್ಚುವುದು. ಆರೋಗ್ಯ ಸಮಸ್ಯೆ ಕಂಡರೆ ನಿರ್ಲಕ್ಷಿಸಬೇಡಿ.    
ಧನು
ದೈನಂದಿನ ಕಾರ್ಯದಿಂದ ರೋಸಿ ಹೋದೀತು. ಭಿನ್ನತೆ ಪಡೆಯಲು ಬಯಸು ವಿರಿ. ಕುಟುಂಬದ ಸಹಕಾರ ಸಿಗಲಿದೆ.  
ಮಕರ
ವೃತ್ತಿಯಲ್ಲಿ ನಿಮ್ಮ ಪ್ರತಿಸ್ಪರ್ದಿಗಳ ಕುರಿತು ಎಚ್ಚರದಿಂದಿರಬೇಕು. ಅವರಿಂದ ಪ್ರತಿಕೂಲ ಸನ್ನಿವೇಶ ಸೃಷ್ಟಿಯಾದೀತು. ಅದನ್ನು ನಿಭಾಯಿಸಿರಿ.
ಕುಂಭ
ಯಾವುದೇ ಕೆಲಸದಲ್ಲಿ ಸಫಲತೆ ಸಿಗಬೇಕಾದರೆ ಆ ಕುರಿತು ಜ್ಞಾನ ಹೆಚ್ಚಿಸಿಕೊಳ್ಳಿ. ಆತುರದ ನಿರ್ಧಾರ ಬೇಡ. ಸಮಾಲೋಚನೆ ಒಳಿತು.
 ಮೀನ
ಅನಿರೀಕ್ಷಿತವಾದುದು ಸಂಭವಿಸಬಹುದು. ನಿಮಗೆ ಪ್ರತಿಕೂಲವಾಗಿದ್ದರೆ ಅದರಿಂದ ದೂರವಿರಿ. ವೃಥಾ ವಿವಾದದಲ್ಲಿ ಸಿಲುಕಲು ಹೋಗದಿರಿ.

Must Read

Skip to toolbar