ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಳಿಗಾಲ ಅಥವಾ ಮಳೆಗಾಲ ಬಂತೆಂದರೆ ಸಾಕು, ನೆಗಡಿ, ಕೆಮ್ಮು ಮತ್ತು ಗಂಟಲು ಕೆರೆತ ನಮ್ಮನ್ನು ಕಾಡಲು ಶುರುಮಾಡುತ್ತವೆ. ಅಂಗಡಿಯಲ್ಲಿ ಸಿಗುವ ಸಿರಪ್ಗಳು ಅಥವಾ ಮಿಠಾಯಿಗಳನ್ನು ತಿನ್ನುವ ಬದಲು, ನಮ್ಮ ಅಡುಗೆ ಮನೆಯಲ್ಲೇ ಸಿಗುವ ಶುಂಠಿಯನ್ನು ಬಳಸಿ ನೈಸರ್ಗಿಕವಾದ “ಹೋಮ್ ಮೇಡ್ ಜಿಂಜರ್ ಕಫ್ ಡ್ರಾಪ್ಸ್” ತಯಾರಿಸಿಕೊಳ್ಳುವುದು ಅತ್ಯಂತ ಆರೋಗ್ಯಕರ ಮತ್ತು ಸುಲಭವಾದ ಮಾರ್ಗವಾಗಿದೆ.
ಶುಂಠಿಯಲ್ಲಿ ‘ಜಿಂಜಿರಾಲ್’ ಎಂಬ ಪವರ್ಫುಲ್ ಅಂಶವಿದ್ದು, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕೆಮ್ಮನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದು ಗಂಟಲಿನಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ, ತಕ್ಷಣದ ಉಪಶಮನ ನೀಡುವುದರಲ್ಲಿ ನಂಬರ್ ಒನ್.
ಬೇಕಾಗುವ ಸಾಮಗ್ರಿಗಳು
ಶುಂಠಿ
ಬೆಲ್ಲ
ನಿಂಬೆ ರಸ
ಉಪ್ಪು, ಅರಿಶಿಣ
ಪುಡಿ ಸಕ್ಕರೆ
ಮಾಡುವ ವಿಧಾನ
ಮೊದಲು ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಕಡಿಮೆ ಉರಿಯಲ್ಲಿ ಕರಗಿಸಿ. ಬೆಲ್ಲ ಪಾಕವಾದ ನಂತರ ಅದಕ್ಕೆ ಶುಂಠಿ ರಸ, ನಿಂಬೆ ರಸ, ಅರಿಶಿಣ ಮತ್ತು ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಕೈಯಾಡಿಸಿ. ಮಿಶ್ರಣವು ಗಟ್ಟಿಯಾಗಿ ಬರುವವರೆಗೆ ಸಣ್ಣ ಉರಿಯಲ್ಲಿ ಕುದಿಸಿ. ಈಗ ಉಂರಿಯನ್ನು ಆಫ್ ಮಾಡಿ, ಸಣ್ಣ ಹನಿಗಳ ರೂಪದಲ್ಲಿ ತಟ್ಟೆಯ ಮೇಲೆ ಸುರಿಯಿರಿ ಅಥವಾ ಮೌಲ್ಡ್ಗೆ ಹಾಕಿ. ಸಂಪೂರ್ಣವಾಗಿ ತಣ್ಣಗಾದ ಮೇಲೆ ಸ್ವಲ್ಪ ಪುಡಿ ಸಕ್ಕರೆ ಉದುರಿಸಿ ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿಡಿ.
ಹೇಗೆ ಬಳಸುವುದು?
ಗಂಟಲು ನೋವು ಬಂದಾಗ ಅಥವಾ ಒಣಕೆಮ್ಮು ಕಾಡಿದಾಗ ಈ ಒಂದು ಕಫ್ ಡ್ರಾಪ್ ಅನ್ನು ಬಾಯಲ್ಲಿಟ್ಟು ನಿಧಾನವಾಗಿ ಚೀಪುತ್ತಿದ್ದರೆ ಸಾಕು. ಗಂಟಲಿಗೆ ತಕ್ಷಣದ ಹಿತ ಸಿಗುತ್ತದೆ. ಇದು ಯಾವುದೇ ಸೈಡ್ ಎಫೆಕ್ಟ್ ಇಲ್ಲದ ನೈಸರ್ಗಿಕ ಔಷಧಿಯಾಗಿದ್ದು, ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಧೈರ್ಯವಾಗಿ ಬಳಸಬಹುದು.



