ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀವನದ ಓಟದಲ್ಲಿ ನಮ್ಮನ್ನು ನಾವು ಮರೆತು ಕೆಲಸ ಮಾಡುತ್ತಲೇ ಇರುತ್ತೇವೆ. ಆದರೆ, ಅತಿಯಾದ ಒತ್ತಡದಿಂದ ಹೊರಬರಲು ಮತ್ತು ಮಾನಸಿಕ ನೆಮ್ಮದಿಗಾಗಿ ಒಂದು ಸರಳವಾದ ‘ಸೆಲ್ಫ್-ಕೇರ್’ ದಿನಚರಿ ಬಹಳ ಮುಖ್ಯ. ಇದನ್ನು ಮಾಡಲು ನಿಮಗೆ ಗಂಟೆಗಟ್ಟಲೆ ಸಮಯ ಬೇಕಿಲ್ಲ. ಬದಲಿಗೆ ಸುಲಭವಾದ ಹಂತಗಳ ಮೂಲಕ ಇದನ್ನು ರೂಢಿಸಿಕೊಳ್ಳಬಹುದು.
ಡಿಜಿಟಲ್ ಡಿಟಾಕ್ಸ್
ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಫೋನ್ ನೋಡುವುದನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿ. ಬದಲಿಗೆ, ಕೆಲವು ನಿಮಿಷಗಳ ಕಾಲ ಪ್ರಕೃತಿಯ ಸೌಂದರ್ಯವನ್ನು ಆಸ್ವದಿಸಿ ಹಾಗೆಯೇ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ನಿಮ್ಮ ದಿನವನ್ನು ಉತ್ಸಾಹದಿಂದ ಆರಂಭಿಸಲು ಸಹಾಯ ಮಾಡುತ್ತದೆ.
ಮನಸ್ಸಿಗೆ ಖುಷಿ ಕೊಡುವ ಹವ್ಯಾಸಗಳು
ನಿಮಗೆ ಇಷ್ಟವಿರುವ ಕೆಲಸಕ್ಕಾಗಿ ದಿನದಲ್ಲಿ ಕನಿಷ್ಠ ೧೫ ನಿಮಿಷ ಮೀಸಲಿಡಿ. ಅದು ಒಳ್ಳೆಯ ಪುಸ್ತಕ ಓದುವುದಿರಬಹುದು, ಇಷ್ಟವಾದ ಹಾಡುಗಳನ್ನು ಕೇಳುವುದಿರಬಹುದು ಇದು ನಿಮ್ಮ ದೈನಂದಿನ ಆಯಾಸವನ್ನು ಮರೆಸುತ್ತದೆ.
ಆರೋಗ್ಯಕರ ಆಹಾರ
ದೇಹ ಸದೃಢವಾಗಿದ್ದರೆ ಮನಸ್ಸು ಕೂಡ ಉಲ್ಲಾಸದಿಂದಿರುತ್ತದೆ. ಹಿತವಾದ ವ್ಯಾಯಾಮ, ಯೋಗ ಅಥವಾ ಸಣ್ಣ ನಡಿಗೆಯನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿ. ಹಾಗೆಯೇ, ಸಮಯಕ್ಕೆ ಸರಿಯಾಗಿ ನೀರು ಕುಡಿಯುವುದು ಮತ್ತು ಪೌಷ್ಟಿಕ ಆಹಾರ ಸೇವಿಸುವುದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ.
ಜರ್ನಲಿಂಗ್
ನಿಮ್ಮ ಮನಸ್ಸಿನಲ್ಲಿರುವ ಆಲೋಚನೆಗಳು ಅಥವಾ ದಿನದ ಅನುಭವಗಳನ್ನು ಒಂದು ಡೈರಿಯಲ್ಲಿ ಬರೆಯುವ ಅಭ್ಯಾಸ ಮಾಡಿ. ಇದರಿಂದ ಮನಸ್ಸು ಹಗುರಾಗುತ್ತದೆ ಮತ್ತು ನಿಮ್ಮ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ನಿದ್ದೆಗೆ ಪ್ರಾಮುಖ್ಯತೆ ನೀಡಿ
ಉತ್ತಮ ಆರೋಗ್ಯಕ್ಕೆ ರಾತ್ರಿಯ ಉತ್ತಮ ನಿದ್ರೆ ಬಹಳ ಮುಖ್ಯ. ಮಲಗುವ ಮುನ್ನ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ನೆಮ್ಮದಿಯಾಗಿ ನಿದ್ದೆ ಮಾಡಿ.
ಸೆಲ್ಫ್-ಕೇರ್ ಎಂದರೆ ಸ್ವಾರ್ಥವಲ್ಲ, ಅದು ನಿಮ್ಮ ಆರೋಗ್ಯ ಮತ್ತು ನೆಮ್ಮದಿಗಾಗಿ ನೀವು ಮಾಡಿಕೊಳ್ಳುವ ಸುಂದರ ಹವ್ಯಾಸ. ಸಣ್ಣ ಬದಲಾವಣೆಗಳಿಂದಲೇ ನಿಮ್ಮ ನೆಮ್ಮದಿಯ ಪ್ರಯಾಣವನ್ನು ಆರಂಭಿಸಿ



