ಬೇಕಾಗುವ ಪದಾರ್ಥಗಳು:
ಬ್ರೆಡ್
ಬೆಣ್ಣೆ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಚಿಲ್ಲಿ ಫ್ಲೇಕ್ಸ್
ಒರೆಗಾನೋ
ಚೀಸ್
ಮಾಡುವ ವಿಧಾನ
ಒಂದು ಬಟ್ಟಲಿನಲ್ಲಿ ಕರಗಿಸಿದ ಬೆಣ್ಣೆ, ಜಜ್ಜಿದ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಚಿಲ್ಲಿ ಫ್ಲೇಕ್ಸ್ ಮತ್ತು ಒರೆಗಾನೋ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬ್ರೆಡ್ ತುಂಡಿನ ಮೇಲ್ಭಾಗಕ್ಕೆ ಈ ತಯಾರಿಸಿದ ಗಾರ್ಲಿಕ್ ಬಟರ್ ಮಿಶ್ರಣವನ್ನು ಸಮಾನವಾಗಿ ಹಚ್ಚಿ. ನಿಮಗೆ ಚೀಸ್ ಇಷ್ಟವಿದ್ದರೆ, ಬಟರ್ ಸವರಿದ ಮೇಲೆ ಸ್ವಲ್ಪ ತುರಿದ ಚೀಸ್ ಅನ್ನು ಮೇಲಿಂದ ಉದುರಿಸಿ. ದೋಸೆ ಹಂಚನ್ನು ಬಿಸಿ ಮಾಡಿ, ಬೆಣ್ಣೆ ಹಚ್ಚಿದ ಭಾಗವನ್ನು ಕೆಳಗೆ ಬರುವಂತೆ ಹಾಕಿ, ಕಡಿಮೆ ಉರಿಯಲ್ಲಿ ಗರಿಗರಿಯಾಗುವವರೆಗೆ ಬೇಯಿಸಿ. ಪ್ರೀಹೀಟ್ ಮಾಡಿದ ಓವನ್ನಲ್ಲಿ 180°C ನಲ್ಲಿ ಚೀಸ್ ಕರಗಿ ಬ್ರೌನ್ ಬಣ್ಣ ಬರುವವರೆಗೆ 5 ರಿಂದ 7 ನಿಮಿಷ ಬೇಯಿಸಿ. ಈಗ ಗರಿಗರಿಯಾದ, ಬಾಯಲ್ಲಿ ನೀರೂರಿಸುವ ಗಾರ್ಲಿಕ್ ಬ್ರೆಡ್ ಟೋಸ್ಟ್ ಸವಿಯಲು ಸಿದ್ಧ!



