November 6, 2026
Friday, November 6, 2026
spot_img

ಬೇಕರಿಯಲ್ಲೇಕೆ ಕಾಯಬೇಕು? ಮನೆಯಲ್ಲೇ ಮಾಡಿ ಗರಿಗರಿಯಾದ ಎಗ್ ಪಫ್

ಬೇಕಾಗುವ ಸಾಮಗ್ರಿಗಳು:

ಪಫ್ ಪಾಸ್ಟ್ರಿ ಶೀಟ್ಸ್

ಬೇಯಿಸಿದ ಮೊಟ್ಟೆಗಳು

ಈರುಳ್ಳಿ

ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಅರಿಶಿಣ, ಖಾರದಪುಡಿ, ಗರಂ ಮಸಲಾ, ಉಪ್ಪು

ಎಣ್ಣೆ

ಮಾಡುವ ವಿಧಾನ

ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಗೋಲ್ಡನ್ ಬ್ರೌನ್ ಬರುವವರೆಗೆ ಬಾಡಿಸಿ. ಈಗ ಅದಕ್ಕೆ ಅರಿಶಿಣ, ಖಾರದಪುಡಿ, ಗರಂ ಮಸಲಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿರಿ. ರೆಡಿಮೇಡ್ ಪಫ್ ಶೀಟ್ ಮೇಲೆ ತಯಾರಿಸಿದ ಈರುಳ್ಳಿ ಮಸಾಲಾವನ್ನು ಸ್ವಲ್ಪ ಇಟ್ಟು, ಅದರ ಮೇಲೆ ಅರ್ಧ ಕತ್ತರಿಸಿದ ಬೇಯಿಸಿದ ಮೊಟ್ಟೆಯನ್ನು ಇಡಿ. ಪಫ್ ಶೀಟ್ ಅನ್ನು ಚೌಕಾಕಾರದಲ್ಲಿ ಮಡಚಿ, ಅಂಚುಗಳನ್ನು ಚೆನ್ನಾಗಿ ಒತ್ತಿ ಮುಚ್ಚಿ. ಓವನ್ ಅಥವಾ ಏರ್ ಫ್ರೈಯರ್‌ನಲ್ಲಿ 180 ಡಿಗ್ರಿಯಲ್ಲಿ ಗೋಲ್ಡನ್ ಬ್ರೌನ್ ಬರುವವರೆಗೆ (ಸುಮಾರು 15-20 ನಿಮಿಷಗಳು) ಬೇಕ್ ಮಾಡಿ. ಈಗ ಗರಿಗರಿಯಾದ, ಬಿಸಿ ಬಿಸಿಯಾದ ‘ಎಗ್ ಪಫ್’ ಸವಿಯಲು ಸಿದ್ಧ!

Must Read

Skip to toolbar