November 7, 2026
Saturday, November 7, 2026
spot_img

ಸಂಜೆ ಚಹಾ ಜೊತೆ ಒಂದೊಳ್ಳೇ ಸ್ನಾಕ್ಸ್ ಬೇಕು ಅನಿಸ್ತಿದ್ರೆ ಈ ಬದನೆಕಾಯಿ ಬಜ್ಜಿ ಟ್ರೈ ಮಾಡಿ

ಬೇಕಾಗುವ ಪದಾರ್ಥಗಳು:

ಬದನೆಕಾಯಿ

ಕಡಲೆ ಹಿಟ್ಟು

ಅಕ್ಕಿ ಹಿಟ್ಟು

ಓಂ ಕಾಳು

ಅರಿಶಿಣ

ಖಾರದ ಪುಡಿ

ಇಂಗು

ಉಪ್ಪು

ಎಣ್ಣೆ

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಅರಿಶಿಣ, ಓಂ ಕಾಳು, ಇಂಗು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ, ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಗಂಟುಗಳಿಲ್ಲದಂತೆ ಕಲಕಿಕೊಳ್ಳಿ. ಬದನೆಕಾಯಿಗಳನ್ನು ನೀರಿನಲ್ಲಿ ತೊಳೆದು, ತೆಳುವಾದ ಚಕ್ರಗಳಾಗಿ ಅಥವಾ ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. ಕತ್ತರಿಸಿದ ತಕ್ಷಣ ಬದನೆಕಾಯಿ ಕಪ್ಪಗಾಗದಂತೆ ಸ್ವಲ್ಪ ಉಪ್ಪು ಬೆರೆಸಿದ ನೀರಿನಲ್ಲಿ ಹಾಕಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿಗಿಡಿ. ಎಣ್ಣೆ ಚೆನ್ನಾಗಿ ಕಾದ ಬಳಿಕ ಉರಿಯನ್ನು ಸಿಮ್ ನಲ್ಲಿ ಇಡಿ. ಹೆಚ್ಚಿದ ಬದನೆಕಾಯಿ ತುಂಡನ್ನು ಕಲಸಿಟ್ಟ ಹಿಟ್ಟಿನಲ್ಲಿ ಅದ್ದಿ, ಒಂದೊಂದಾಗಿ ಕಾದ ಎಣ್ಣೆಗೆ ಬಿಡಿ. ಎರಡೂ ಕಡೆ ಗೋಲ್ಡನ್ ಬ್ರೌನ್ ಬರುವವರೆಗೆ ಗರಿಗರಿಯಾಗಿ ಕರಿದು ಎಣ್ಣೆಯಿಂದ ಹೊರತೆಗೆಯಿರಿ. ಈಗ ಬಿಸಿಬಿಸಿಯಾದ ರುಚಿಕರವಾದ ಬದನೆಕಾಯಿ ಬಜ್ಜಿ ಸಿದ್ಧ.

Must Read

Skip to toolbar