November 7, 2026
Saturday, November 7, 2026
spot_img

ಸೋಲಿನ ದವಡೆಯಿಂದ ಪಾರು ಮಾಡಿದ ಮಳೆ: ಕಿವೀಸ್ ವಿರುದ್ಧ ಜಯ ಸಾಧಿಸಿದ ಟೀಮ್ ಇಂಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ರೋಚಕ ಸನ್ನಿವೇಶಗಳು ಕಂಡುಬಂದವು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆದರೆ, ಗುರಿ ಬೆನ್ನಟ್ಟುವಾಗ ಎದುರಾದ ಸಂಕಷ್ಟದಿಂದ ಮಳೆಯು ತಂಡವನ್ನು ಪಾರು ಮಾಡಿತು.

ಪಂದ್ಯದ ಆರಂಭದಿಂದಲೂ ಭಾರತೀಯ ಬೌಲರ್‌ಗಳು ನ್ಯೂಜಿಲೆಂಡ್ ಬ್ಯಾಟರ್‌ಗಳ ಮೇಲೆ ಸವಾರಿ ಮಾಡಿದರು. ಆರಂಭಿಕ ಆಟಗಾರರಾದ ವಿಲ್ ಯಂಗ್ (6) ಮತ್ತು ಖಾತೆ ತೆರೆಯದ ಟಿಮ್ ಸೈಫರ್ಟ್ ಬೇಗನೆ ನಿರ್ಗಮಿಸಿದರು. ಹೆನ್ರಿ ನಿಕೋಲ್ಸ್ (11) ಕೂಡ ಬೇಗನೆ ಔಟಾದರು.

ಆದರೆ, ಮಧ್ಯಮ ಕ್ರಮಾಂಕದಲ್ಲಿ ಗಟ್ಟಿಯಾಗಿ ನಿಂತ ಡ್ಯಾರಿಲ್ ಮಿಚೆಲ್ 104 ಎಸೆತಗಳಲ್ಲಿ 55 ರನ್ ಗಳಿಸಿ ತಂಡದ ಗೌರವಾನ್ವಿತ ಮೊತ್ತಕ್ಕೆ ಕಾರಣರಾದರು. ಮಿಚೆಲ್ ಸ್ಯಾಂಟ್ನರ್ (31) ಹೊರತುಪಡಿಸಿ ಇನ್ಯಾವ ಬ್ಯಾಟರ್‌ಗಳೂ ಪಿಚ್‌ನಲ್ಲಿ ಹೆಚ್ಚು ನಿಲ್ಲಲಿಲ್ಲ. ಪರಿಣಾಮವಾಗಿ ನ್ಯೂಜಿಲೆಂಡ್ ತಂಡವು 41 ಓವರ್‌ಗಳಲ್ಲಿ ಕೇವಲ 134 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತದ ಪರ ಯುವ ವೇಗಿ ಗುರ್‌ನೂರ್ ಬ್ರಾರ್ ಅತ್ಯುತ್ತಮ ಪ್ರದರ್ಶನ ನೀಡಿ, 10 ಓವರ್‌ಗಳಲ್ಲಿ ಕೇವಲ 30 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಇವರಿಗೆ ಸಾಥ್ ನೀಡಿದ ಆಕಿಬ್ ನಬಿ, ಅಂಶುಲ್ ಕಾಂಬೋಜ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಕೂಡ ಆರಂಭಿಕ ಆಘಾತಗಳನ್ನು ಎದುರಿಸಿ ಗೆಲುವಿನ ಹಾದಿಯಿಂದ ಸ್ವಲ್ಪ ವಿಚಲಿತಗೊಂಡಿತು. ತಂಡದ ಸ್ಕೋರ್ ನಿರ್ಣಾಯಕ ಹಂತದಲ್ಲಿದ್ದಾಗ ಮಳೆರಾಯ ಸುರಿಯಲಾರಂಭಿಸಿದನು. ಡಿಎಲ್‌ಎಸ್ ನಿಯಮದ ಅನ್ವಯ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಈ ವೇಳೆ ನಿಯಮದ ಪ್ರಕಾರ ಭಾರತ ತಂಡವು 4 ರನ್‌ಗಳ ಅಂತರದಿಂದ ಮುನ್ನಡೆಯಲ್ಲಿತ್ತು. ಅಂತಿಮವಾಗಿ ವರುಣನ ಕೃಪೆಯಿಂದ ಭಾರತ ತಂಡವು ಸೋಲಿನ ದವಡೆಯಿಂದ ಪಾರಾಗಿ 4 ರನ್‌ಗಳಿಂದ ರೋಚಕ ಜಯ ಸಾಧಿಸಿತು.

Must Read

Skip to toolbar