ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ
ಚೀಸ್
ಹಸಿಮೆಣಸಿನಕಾಯಿ
ಕೊತ್ತುಂಬರಿ ಸೊಪ್ಪು
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಮೆಣಸಿನ ಪುಡಿ
ಒರೆಗಾನೋ
ಕಾರ್ನ್ ಫ್ಲೋರ್
ಬ್ರೆಡ್ ಕ್ರಂಬ್ಸ್
ಉಪ್ಪು
ಎಣ್ಣೆ
ಮಾಡುವ ವಿಧಾನ
ದೊಡ್ಡ ಪಾತ್ರೆಯಲ್ಲಿ ಸ್ಮಾಶ್ ಮಾಡಿದ ಆಲೂಗಡ್ಡೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಕೊತ್ತುಂಬರಿ ಸೊಪ್ಪು, ಮೆಣಸಿನ ಪುಡಿ, ಒರೆಗಾನೋ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಕಲಸಿದ ಆಲೂಗಡ್ಡೆ ಮಿಶ್ರಣವನ್ನು ಸ್ವಲ್ಪ ಕೈಗೆ ತೆಗೆದುಕೊಂಡು ಮಧ್ಯದಲ್ಲಿ ತಟ್ಟಿ ಅದರೊಳಗೆ ಸ್ವಲ್ಪ ಚೀಸ್ ಹಾಕಿ ಚೆನ್ನಾಗಿ ಉಂಡೆ ಆಕಾರಕ್ಕೆ ಕಟ್ಕೊಳ್ಳಿ. ಒಂದು ಬೌಲ್ ನಲ್ಲಿ ಕಾರ್ನ್ ಫ್ಲೋರ್ ಗೆ ಸ್ವಲ್ಪ ನೀರು ಹಾಕಿ ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಚೀಸ್ ಬಾಲ್ ಅನ್ನು ಮೊದಲು ಈ ಹಿಟ್ಟಿನಲ್ಲಿ ಅದ್ದಿ, ನಂತರ ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಮೈಯೆಲ್ಲಾ ಚೆನ್ನಾಗಿ ಉಜ್ಜಿ. ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ತಯಾರಿಸಿದ ಚೀಸ್ ಬಾಲ್ಸ್ಗಳನ್ನು ಮೀಡಿಯಂ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಗರಿಗರಿಯಾಗಿ ಕರಿದು ತೆಗೆಯಿರಿ. ಈಗ ಬಿಸಿ-ಬಿಸಿಯಾದ ಚೀಸ್ ಬಾಲ್ಸ್ ಅನ್ನು ಟೊಮೆಟೊ ಸಾಸ್ ಜೊತೆ ಸವಿಯಲು ನೀಡಿ!



